
ಅಹಮದಾಬಾದ್: ಕೆಲವು ಖ್ಯಾತ ಸಾಹಿತಿಗಳು ಪ್ರಶಸ್ತಿ ನೀಡುತ್ತಿರುವುದು ಒಂದು ಅಪ್ರಬುದ್ಧ ನಡೆ ಮತ್ತು ಅವರ ಪ್ರತಿಭಟನಾ ರೀತಿ ಸರಿಯಿಲ್ಲ ಎಂದು 2015ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಗುಜರಾತಿ ಸಾಹಿತಿ ರಘುವೀರ್ ಚೌಧರಿ ಅವರು ಬುಧವಾರ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಭಟನೆ ಲೇಖಕರು ತಮ್ಮ ಪ್ರಶಸ್ತಿ ವಾಪಸ್ ನೀಡುವು ಬದಲು ಬೇರೆ ಮಾರ್ಗ ಅನುಸರಿಸಲಿ. ಏಕೆಂದರೆ ಈಗ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿಲ್ಲ ಎಂದಿದ್ದಾರೆ.
ಸಾಹಿತಿಗಳು ತಮ್ಮ ಪ್ರಶಸ್ತಿಯನ್ನು ವಾಪಸ್ ನೀಡುತ್ತಿರುವುದು ಒಂದು ಅಪ್ರಬುದ್ಧ ನಡೆ ಅಂತ ನಾನು ಭಾವಿಸಿದ್ದೇನೆ ಎಂದು ಚೌಧರಿ ಹೇಳಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಇತ್ತೀಚಿಗೆ ಹಲವು ಲೇಖಕರು ಹಾಗೂ ಕಲಾವಿದರು ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದರು.
Advertisement