ಭಾರತೀಯ ನೌಕಾದಳ ಬರಾಕ್ 8 ಎಂಬ ಲಾಂಗ್ ರೇಂಜ್ ಸರ್ಫೇಸ್ ಟು ಏರ್ ಕ್ಷಿಪಣಿಯೊಂದನ್ನು ಗುರುವಾರ ಯಶಸ್ವಿ ಪರೀಕ್ಷೆ ನಡೆಸಿದೆ. ಈ ಯಶಸ್ವಿ ಪರೀಕ್ಷೆ ಮೂಲಕ ಭಾರತೀಯ ನೌಕಾದಳ ಹೊಸ ಮೈಲುಗಲ್ಲೊಂದನ್ನು ಸಾಧಿಸಿದೆ.
ಈ ಕ್ಷಿಪಣಿಯ ವಿಶೇಷತೆಗಳೇನು?
ಪಾಕಿಸ್ತಾನ ಅಥವಾ ಚೀನಾದ ನೌಕಾದಳ ನಿರ್ಮಿಸಿದ ಆ್ಯಂಟಿ ಶಿಪ್ ಕ್ಷಿಪಣಿಯನ್ನು ನಾಶ ಪಡಿಸುವ ಸಾಮರ್ಥ್ಯ ಬರಾಕ್ 8 ಕ್ಷಿಪಣಿಗೆ ಇದೆ.
ಇಸ್ರೇಲ್ ನಿರ್ಮಿತ ಎಂ ಎಫ್ ಸ್ಟಾರ್ ರಡಾರ್ ಸಿಸ್ಟಂ ಹೊಂದಿರುವ ಕ್ಷಿಪಣಿ ಇದಾಗಿದ್ದು, 250 ಕಿಮೀಕ್ಕಿಂತಲೂ ಹೆಚ್ಚು ದೂರದಿಂದ ವೈಮಾನಿಕ ದಾಳಿ ಬಗ್ಗೆ ಪತ್ತೆ ಹಚ್ಚಬಲ್ಲ ಸಾಮರ್ಥ್ಯವುಳ್ಳದ್ದಾಗಿದೆ.
ದೂರದಿಂದಲೂ ಹತ್ತಿರದಿಂದಲೂ ವೈಮಾನಿಕ ದಾಳಿ ನಡೆಸಲ್ಪಡುವ, ಫಿಕ್ಸ್‌ಡ್ ವಿಂಗ್ ಏರ್‌ಕ್ರಾಫ್ಟ್, ಹೆಲಿಕಾಪ್ಟರ್, ಡ್ರೋಣ್ ಮತ್ತು ಪ್ರೊಜೆಕ್ಟೈಲ್ಸ್ ಗಳನ್ನು ತಡೆಯುವ ಸಾಮರ್ಥ್ಯ ಇವುಗಳಿಗಿವೆ.
ಡಿಆರ್‌ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಲಿಮಿಟೆಡ್ ಜಂಟಿಯಾಗಿ ಈ ಕ್ಷಿಪಣಿಯನ್ನು ನಿರ್ಮಿಸಿದೆ.
ಕಳೆದ ವರ್ಷ ನೌಕಾಪಡೆ ಸೇರಿದ್ದ ಐಎನ್‌ಎಸ್ ಕೊಲ್ಕತ್ತಾ ಯುದ್ಧನೌಕೆಯಲ್ಲಿ ಈ ಕ್ಷಿಪಣಿಯನ್ನು ನಿಯೋಜನೆ ಮಾಡಲಾಗಿದೆ.
ಇಸ್ರೇಲ್ ನೌಕಾ ನೆಲೆಯಲ್ಲಿ ನವೆಂಬರ್ ತಿಂಗಳಲ್ಲಿ ಇದೇ ಕ್ಷಿಪಣಿಯನ್ನು ಪರೀಕ್ಷೆ ಮಾಡಿ ಯಶಸ್ವಿಯಾಗಿತ್ತು.