ಸಮ-ಬೆಸ ಯೋಜನೆಗೆ ಅಮೆರಿಕ ರಾಯಭಾರ ಕಚೇರಿ ಬೆಂಬಲ

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರದ ಸಮ-ಬೆಸ ಯೋಜನೆಗೆ ಇಲ್ಲಿನ ಅಮೆರಿಕ ರಾಯಭಾರ ಕಚೇರಿ ಬೆಂಬಲ ವ್ಯಕ್ತಪಡಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರದ ಸಮ-ಬೆಸ ಯೋಜನೆಗೆ ಇಲ್ಲಿನ ಅಮೆರಿಕ ರಾಯಭಾರ ಕಚೇರಿ ಬೆಂಬಲ ವ್ಯಕ್ತಪಡಿಸಿದೆ.
ವಾಯು ಮಾಲಿನ್ಯದ ಸಮಸ್ಯೆಗಳನ್ನು ತಗ್ಗಿಸಲು ದೆಹಲಿ ಸರ್ಕಾರದ ತೆಗೆದುಕೊಂಡ ಕ್ರಮ ಉತ್ತಮವಾಗಿದೆ ಮತ್ತು ಈ ನೀತಿಯಿಂದ ರಾಯಭಾರ ಕಚೇರಿಯ ಅಧಿಕೃತ ವಾಹನಗಳಿಗೆ ವಿನಾಯಿತಿ ಇದೆ. ಆದರೂ ವಾಯು ಮಾಲಿನ್ಯ ತಗ್ಗಿಸುವ ಯತ್ನಕ್ಕೆ ನಮ್ಮ ಬೆಂಬಲವಿದೆ ಎಂದು ರಾಯಭಾರ ಕಚೇರಿ ಪತ್ರಿಕಾ ಹೇಳಿಕೆ ನೀಡಿದೆ.
ಸಮ-ಬೆಸ ನಿಮಯ ಜಾರಿಯಲ್ಲಿರುವ ಸಂದರ್ಭದಲ್ಲಿ ಅಮೆರಿಕದ ನೌಕರರು ಸ್ವಯಂ ಪ್ರೇರಣೆಯಿಂದ ಇದಕ್ಕೆ ಸಹಕಾರ ನೀಡಲಿದ್ದಾರೆ. ರಾಯಭಾರ ಕಚೇರಿಯ ಹಲವು ನೌಕರರು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ ಎಂದು ಹೇಳಿದೆ.
ಸಮ-ಬೆಸ ಸಂಖ್ಯೆ ಆಧಾರದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ದೆಹಲಿ ಸರ್ಕಾರದ ನೂತನ ನಿಮಯ ಜನವರಿ 1ರಿಂದ ಜಾರಿಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com