ಅದ್ನಾನ್ ಸಾಮಿ
ದೇಶ
ಪಾಕ್ ಗಾಯಕ ಅದ್ನಾನ್ ಸಾಮಿಗೆ ಭಾರತೀಯ ಪೌರತ್ವ
ಅರ್ನಿಧಾಷ್ಟವಧಿ ವೀಸಾ ಮೇಲೆ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಹೊಸ ವರ್ಷದಿಂದ ಭಾರತೀಯ ಪೌರತ್ವ ಹೊಂದಲಿದ್ದಾರೆ.
ನವದೆಹಲಿ: ಅರ್ನಿಧಾಷ್ಟವಧಿ ವೀಸಾ ಮೇಲೆ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಹೊಸ ವರ್ಷದಿಂದ ಭಾರತೀಯ ಪೌರತ್ವ ಹೊಂದಲಿದ್ದಾರೆ.
2016, ಜನವರಿ 1ರಿಂದ ಜಾರಿಗೆ ಬರುವಂತೆ ಅದ್ನಾನ್ ಸಾಮಿ ಅದ್ನಾನ್ ಸಾಮಿ ಅವರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾನವೀಯತೆಯ ನೆಲೆಯಲ್ಲಿ ತಮಗೆ ಭಾರತದ ಪೌರತ್ವ ನೀಡಬೇಕೆಂದು ಕೋರಿ ಅದ್ನಾನ್ ಸಾಮಿ ಅವರು 2015ರ ಮೇ 26ರಂದು ಕೇಂದ್ರ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಪಾಕ್ ಗಾಯಕನ ಮನವಿಯನ್ನು ಪುರಸ್ಕರಿಸಿರುವ ಕೇಂದ್ರ ಸರ್ಕಾರ, ಅವರಿಗೆ ಭಾರತೀಯ ಪೌರತ್ವ ನೀಡಿದೆ.
ಲಾಹೋರ್ ಮೂಲದ ಅದ್ನಾನ್ ಸಾಮಿ ಮಾರ್ಚ್ 13, 2001ರಲ್ಲಿ ಪ್ರವಾಸಿ ವೀಸಾ ಮೇಲೆ ಭಾರತಕ್ಕೆ ಆಗಮಿಸಿದ್ದರು. ಅದಿನಿಂದ 2010ರವರೆಗೆ ಪ್ರತಿವರ್ಷ ವೀಸಾ ಅವಧಿಯನ್ನು ನವೀಕರಿಸಲಾಗಿತ್ತು. ಆದರೆ ಮೇ 26, 2015ರಿಂದ ಸಾಮಿ ವೀಸಾವನ್ನು ಪಾಕಿಸ್ತಾನ ಸರ್ಕಾರ ನವೀಕರಿಸಿರಲಿಲ್ಲ.

