ಸೋನಿಯಾ ಗಾಂಧಿ ಮನೆ ಪ್ರಧಾನಿ ಮನೆಗಿಂತ ದೊಡ್ಡದು!

ನಂಬಲು ಕಷ್ಟವಾದರೂ ಇದು ಸತ್ಯ. ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕಿಂತ...
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನಿವಾಸದ ಹೊರಗೆ (ಸಾಂದರ್ಭಿಕ ಚಿತ್ರ)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನಿವಾಸದ ಹೊರಗೆ (ಸಾಂದರ್ಭಿಕ ಚಿತ್ರ)

ನವದೆಹಲಿ: ನಂಬಲು ಕಷ್ಟವಾದರೂ ಇದು ಸತ್ಯ. ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕಿಂತ ಜನಪಥ ರಸ್ತೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ ದೊಡ್ಡದಾಗಿದೆ.

ದೇವ್ ಅಶೀಶ್  ಭಟ್ಟಾಚಾರ್ಯ, ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ಸಿಕ್ಕಿದ ಮಾಹಿತಿ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷೆಯವರ ನಿವಾಸದ  ವಿಸ್ತೀರ್ಣ 15 ಸಾವಿರದ 181 ಚದರಡಿ ಇದ್ದರೆ ಪ್ರಧಾನಿಯವರದ್ದು, 14 ಸಾವಿರದ 101 ಚದರಡಿ. ಇನ್ನು ಸೋನಿಯಾ ಗಾಂಧಿಯವರ ಪುತ್ರ ರಾಹುಲ್ ಗಾಂಧಿಯವರಿಗೆ ಸರ್ಕಾರದಿಂದ ದೆಹಲಿಯ ತುಘಲಕ್ ರಸ್ತೆಯಲ್ಲಿ 5 ಸಾವಿರದ 22.58 ಚದರಡಿ ವಿಸ್ತೀರ್ಣದ ಬಂಗಲೆಯನ್ನು ನೀಡಲಾಗಿದೆ. ಇನ್ನು ಪ್ರಿಯಾಂಕ ಗಾಂಧಿ ಸಂಸದೆ ಅಲ್ಲದಿದ್ದರೂ ಅವರಿಗೆ ಲೋಧಿ ಎಸ್ಟೇಟ್ ನಲ್ಲಿ 2 ಸಾವಿರದ 765 ಚದರಡಿ ವಿಸ್ತೀರ್ಣದ ಮನೆಯನ್ನು ನೀಡಲಾಗಿದೆ.

ನಮ್ಮ ದೇಶದಲ್ಲಿ ಸರ್ಕಾರದಿಂದ ಇಬ್ಬರಿಗೆ ಮಾತ್ರ ಅತಿ ದೊಡ್ಡ ಮನೆ ನೀಡಲಾಗಿದೆ. ಅವರೆಂದರೆ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ. ರಾಷ್ಟ್ರಪತಿ ಭವನದ ವಿಸ್ತೀರ್ಣ 320 ಎಕರೆ ಇದ್ದು, ಅದು ಎಲ್ಲದಕ್ಕಿಂತ ಅತಿ ಹೆಚ್ಚಾಗಿದೆ.

ಆದರೆ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆಯಡಿ ಭದ್ರತೆಯ ಕಾರಣದಿಂದ ಹಿಮಾಚಲ ಪ್ರದೇಶದಲ್ಲಿ  ಪ್ರಿಯಾಂಕಾ ಗಾಂಧಿಯವರಿಗೆ  ಸೇರಿರುವ ಆಸ್ತಿ ವಿವರವನ್ನು ಬಹಿರಂಗಪಡಿಸಲು ಅಲ್ಲಿನ ಸರ್ಕಾರ ಒಪ್ಪಿಕೊಂಡಿಲ್ಲ ಎಂದು ದೇವ್ ಆಶೀಶ್ ಭಟ್ಟಾಚಾರ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com