ನೆಟ್‍ನ್ಯೂಟ್ರಾಲಿಟಿ
ನೆಟ್‍ನ್ಯೂಟ್ರಾಲಿಟಿ

ನ್ಯೂಟ್ರಾಲಿಟಿ ಅವಧಿ ವಿಸ್ತರಣೆ

ನೆಟ್‍ನ್ಯೂಟ್ರಾಲಿಟಿ ಕುರಿತಂತೆ ಭಾರಿ ಚರ್ಚೆಗೆ ಕಾರಣವಾಗಿರುವ ವ್ಯತ್ಯಾಸ ಡಾಟಾ ದರ ಕುರಿತು ಬಿಡುಗಡೆ ಮಾಡಿರುವ ವರದಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ...

ನವದೆಹಲಿ: ನೆಟ್‍ನ್ಯೂಟ್ರಾಲಿಟಿ ಕುರಿತಂತೆ ಭಾರಿ ಚರ್ಚೆಗೆ ಕಾರಣವಾಗಿರುವ ವ್ಯತ್ಯಾಸ ಡಾಟಾ ದರ ಕುರಿತು ಬಿಡುಗಡೆ ಮಾಡಿರುವ ವರದಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸ್ವೀಕರಿಸುವ ಅವಧಿಯನ್ನು ಭಾರತೀಯ ದೂರ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜ.7ರವರೆಗೂ ವಿಸ್ತರಿಸಿದೆ. ಈ ಹಿಂದೆ ನಿಗದಿ ಮಾಡಿದ್ದ ಗಡವು ಬುಧವಾರ ಕೊನೆಗೊಳ್ಳಬೇಕಿತ್ತು.

ಹಲವರು ಮನವಿ ಮಾಡಿದ್ದರಿಂದ ಅದರಲ್ಲೂ ದೂರಸಂಪರ್ಕ ಸೇವಾ ಕಂಪನಿಗಳ ಒಕ್ಕೂಟ ಸಿಒಎಐ ಮತ್ತು ಎಯುಎಸ್‍ಪಿಐ ಮನವಿ ಮೇರೆಗೆ ಈ ಅವಧಿ ವಿಸ್ತರಿಸಲಾಗಿದೆ ಎಂದು ಟ್ರಾಯ್ ನ ಅಧಿಕೃತ ಮೂಲಗಳು ತಿಳಿಸಿವೆ. ಟ್ರಾಯ್ ಬಿಡುಗಡೆ ಮಾಡಿರುವ ವರದಿಯಲ್ಲಿ ನೆಟ್‍ನ್ಯೂಟ್ರಾಲಿಟಿ ಎಂಬ ಪದವನ್ನು ಬಳಕೆ ಮಾಡದಿದ್ದರೂ, ಉಚಿತ ಇಂಟರ್‍ನೆಟ್ ವೆಬ್‍ಸೈಟ್‍ಗಳ ಕುರಿತು ವಿವರಿಸಲಾಗಿದೆ. ಬುಧವಾರದ ಅಂತ್ಯದವರೆಗೆ 16.5 ಲಕ್ಷ ಪ್ರತಿಕ್ರಿಯೆಗಳು ಬಂದಿವೆ. ಇದುವರೆಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಬಿಡುಗಡೆ ಮಾಡಿರುವ ಪೇಪರ್‍ಗೆ ಬಂದಿರುವ ಅತ್ಯಧಿಕ ಪ್ರತಿಕ್ರಿಯೆಗಳಾಗಿವೆ.

ತಜ್ಞರ ವಿರೋಧ: ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ಸ್ ಗೆ ಹಲವು ಮೂಲಗಳಿಂದ ವಿರೋಧಗಳು ವ್ಯಕ್ತವಾಗಿವೆ. ಇಕಾಮರ್ಸ್ ಕಂಪನಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮ ಇದು 'ಸ್ವತಂತ್ರ ಇಂಟರ್‍ನೆಟ್ ವಿರುದ್ಧ ಜಿಹಾದ್' ಎಂದು ಟ್ವೀಟ್ ಮಾಡಿದ್ದಾರೆ. ಒಂಬತ್ತು ಸ್ಟಾರ್ಟ್‍ಅಪ್‍ಗಳ ಸಂಸ್ಥಾಪಕರು, ಐಐಟಿಯ ಸರಿಸುಮಾರು 40 ಫೋಸ್ಟರ್‍ಗಳು ಟ್ರಾಯ್ಗೆ ಪತ್ರ ಬರೆದು ಭಾರತೀಯರು ಇಂಟರ್‍ನೆಟ್ ಬಳಕೆ ಸ್ವಾತಂತ್ರ್ಯವನ್ನು ಫ್ರೀಬೇಸಿಕ್ಸ್ ಹತ್ತಿಕ್ಕಲಿದೆ ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com