ಎಲ್ಲಾ ರಾಜಕೀಯ ಪಕ್ಷಗಳ ದೇಣಿಗೆ ಬಗ್ಗೆ ಎಸ್‌ಐಟಿ ತನಿಖೆಯಾಗಲಿ: ಆಪ್

ಆಪ್‌
ಆಪ್‌

ನವದೆಹಲಿ: ನಕಲಿ ಕಂಪನಿಗಳ ದೇಣಿಗೆ ಕುರಿತಂತೆ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪ ಬಂದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಎಲ್ಲಾ ರಾಜಕೀಯ ಪಕ್ಷಗಳ ದೇಣಿಗೆ ಹಣದ ಕುರಿತಂತೆ ಎಸ್ಐಟಿ ತನಿಖೆಯಾಗಲಿ ಎಂದು ಹೇಳಿದ್ದಾರೆ.

ದೇಣಿಗೆ ಕುರಿತಂತೆ ಎಸ್ಐಟಿ ತನಿಖೆಯಾಗಲಿ ಎಂದು ಹೇಳಿರುವ ಕೇಜ್ರಿವಾಲ್, ಈ ಬಗ್ಗೆ  ತಮ್ಮ ಅಭಿಪ್ರಾಯ ತಿಳಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಪಕ್ಷಗಳಿಗೆ ಹರಿದು ಬರುತ್ತಿರುವ ದೇಣಿಗೆ ಹಣ ಕುರಿತಂತೆ ತನಿಖೆಯಾಗಲಿ ಆಗ ಮಾತ್ರ ಪಾರದರ್ಶಕತೆ ತರಲು ಸಾಧ್ಯ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಬೋಗಸ್ ಕಂಪನಿಗಳಿಂದ ಹಣ ಬಂದಿದೆ ಎಂದು ಆಮ್ ಆದ್ಮಿ ಪಕ್ಷದಿಂದ ಹೊರಬಂದು ಆಪ್ ಸ್ವಯಂ ಸೇವಾ ಕ್ರಿಯಾ ಮಂಚ್(ಅವಂ) ಸ್ಥಾಪಿಸಿಕೊಂಡಿರುವ ಗುಂಪೊಂದು ಆರೋಪಿಸಿತ್ತು. ಈ ಸಂಬಂಧ ಎಸ್ಐಟಿ ತನಿಖೆಯಾಗಲಿ ಎಂದು ಕೇಜ್ರಿವಾಲ್ ಸುಪ್ರೀಂಕೋರ್ಟ್ಗೆ ಮನವಿ ಮಾಡಲಿದ್ದಾರೆ.

ಹವಾಲ ಹಣ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಆಪ್ ಪಕ್ಷಗಳ ವಿರುದ್ಧ ಎಸ್‌ಐಟಿ ತನಿಖೆಯಾಗಲಿ ಎಂದು ಆಪ್‌ನ ಐವರು ಮುಖಂಡರು ಮಂಗಳವಾರ ಬಗ್ಗೆ ಸುಪ್ರೀಂಕೋರ್ಟ್ ಮನವಿ ಸಲ್ಲಿಸಲಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಆಪ್ ಪಕ್ಷದಿಂದ ಹೊರಬಂದು ಆವಂ ಪಕ್ಷ ಸ್ಥಾಪಿಸಿಕೊಂಡಿರುವ ಕೆಲವರು ಆಮ್ ಆದ್ಮಿ ಪಕ್ಷಕ್ಕೆ 51 ಬೋಗಸ್ ಕಂಪನಿಗಳಿಂದ ಹಣ ಬಂದಿದೆ. ಈ ಪೈಕಿ ನಾಲ್ಕು ಕಂಪನಿಗಳು ತಲಾ 50 ಲಕ್ಷ ರು. ಹಣ ನೀಡಿವೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆನೆಂದರೆ ಒಂದು ಕಂಪನಿಯ ವಿಳಾಸದಲ್ಲಂತೂ ಗುಡಿಸಲು ಪತ್ತೆಯಾಗಿದೆ ಎಂದು ಆರೋಪ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com