ಆಹಾರ ಭದ್ರತಾ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಿದ್ಧತೆ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳರ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ...
ಆಹಾರ ಭದ್ರತಾ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಿದ್ಧತೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳರ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ, ಇನ್ನು ಮುಂದೆ ಸಬ್ಸಿಡಿ ಆಹಾರ ಧಾನ್ಯಗಳು ಶೇ.67ರಷ್ಟು ಜನರ ಬದಲಿಗೆ ಶೇ.40ರಷ್ಟು ಮಂದಿಗೆ ಮಾತ್ರ ಸಿಗುವ ಸಾಧ್ಯತೆಯಿದೆ.

ಸಬ್ಸಿಡಿ ಆಹಾರ ಧಾನ್ಯಕ್ಕೆ ಮಿತಿ ಹೇರುವುದು, ಅಗ್ಗದ ದರದಲ್ಲಿ ಸಿಗುವ ಆಹಾರ ಧಾನ್ಯಗಳ ದರ ಏರಿಸುವುದು ಸೇರಿದಂತೆ ತೀವ್ರಗತಿಯ ಆಹಾರ ಸುಧಾರಣೆಗೆ ಶಿಫಾರಸು ಮಾಡಿ ಹಿಮಾಚಲ ಪ್ರದೇಶದ ಮಾಜಿ ಸಿಎಂ ಶಾಂತಕುಮಾರ್ ನೇತೃತ್ವದ ಸಮಿತಿಯು ಜ.21ರಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು, ವರದಿಯನ್ನು ಅನುಷ್ಠಾನಗೊಳಿಸಲು ಆಹಾರ ಸಚಿವಾಲಯಕ್ಕೆ ಆದೇಶಿಸಿದೆ. ಫೆ.11ರಂದು ಸಚಿವ ರಾಮ್‌ವಿಲಾಸ್ ಪಾಸ್ವಾನ್ ನೇತೃತ್ವದ ಆಹಾರ ಸಚಿವಾಲಯವು ಸಭೆ ನಡೆಸಲಿದ್ದು, ವರದಿ ಅನುಷ್ಠಾನಕ್ಕೆ ಮಾರ್ಗಸೂಚಿ ಸಿದ್ಧಪಡಿಸಲಿದೆ.

ಆದರೆ ಸರ್ಕಾರ ನೀಡುವ ಸಬ್ಸಿಡಿ ಆಹಾರ ಧಾನ್ಯಗಳನ್ನೇ ಅವಲಂಬಿಸಿ ಬದುಕುತ್ತಿರುವವರ ಸಂಖ್ಯೆ ಭಾರತದಲ್ಲಿ ಹೆಚ್ಚಿದ್ದು, ಸಮಿತಿಯು ಶಿಫಾರಸು ಮಾಡಿರುವ ಎಲ್ಲ ಸುಧಾರಣಾ ಕ್ರಮಗಳನ್ನು ಜಾರಿ ಮಾಡುವುದು ಕಷ್ಟಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com