ಹವಾಲಾ ತನಿಖೆ: ಸುಪ್ರೀಂಗೆ ಆಪ್ ಪತ್ರ

ಕೇಜ್ರಿವಾಲ್ ನೇತೃತ್ವದ ಆಪ್ ವಿರುದ್ಧ `ಹವಾಲಾ ಹಣ' ಸ್ವೀಕಾರ ಆರೋಪ ಕೇಳಿಬಂದ ಬೆನ್ನಲ್ಲೇ ಸುಪ್ರೀಂ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಪಕ್ಷ, ಈ ಬಗ್ಗೆ ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ ಎಂದು ಮನವಿ ಮಾಡಿದೆ.

ಅಷ್ಟೇ ಅಲ್ಲ, ಕಾಂಗ್ರೆಸ್, ಬಿಜೆಪಿ ಮತ್ತು ಆಪ್ ಮೂರೂ ಪಕ್ಷಗಳಿಗೆ ಬರುತ್ತಿರುವ ಹಣದ ಬಗ್ಗೆಯೂ ತನಿಖೆಯಾಗಬೇಕು ಎಂದೂ ಪತ್ರದಲ್ಲಿ ಕೋರಲಾಗಿದೆ. ಇದೇ ವೇಳೆ, ಬೋಗಸ್ ಕಂಪನಿಗಳಿಂದ ರು. 2 ಕೋಟಿ ದೇಣಿಗೆ ಪಡೆದ ಆರೋಪ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಆಪ್ ನಾಯಕರು, ಯಾವುದೇ ತನಿಖೆಗೂ ನಾವು ಸಿದ್ಧ ಎಂದಿದ್ದಾರೆ.

ಸರ್ಕಾರ ತನಿಖೆ ಶುರು ಮಾಡಲಿ. ನಮ್ಮ ತಪ್ಪಿದ್ದರೆ ನಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ. ಜತೆಗೆ, ಜೇಟ್ಲಿ ಅವರು ಸುದ್ದಿಗೋಷ್ಠಿ ಕರೆಯುವ ಬದಲು ಬ್ಯಾಂಕುಗಳ ಸಿಇಒಗಳನ್ನು ಕರೆಸಿ, 4 ಚೆಕ್‍ಗಳ ಬಗ್ಗೆ ಅವರಿಗಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳಲಿ ಎಂದೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com