ಇಂಟರ್ನೆಟ್ ಚಟ ಬಿಡಲು ಕೈ ಕತ್ತರಿಸಿಕೊಂಡ ವಿದ್ಯಾರ್ಥಿ

ವಿಪರೀತ ಇಂಟರ್ ನೆಟ್ ದುಶ್ಚಟ ಬಿಡಲು ಮನಸ್ಸು ಒಪ್ಪದೆ, ಶಿಕ್ಷಕರು ಮತ್ತು ಪೋಷಕರಿಂದ ನಿಂದನೆಯಿಂದ ಬೇಸತ್ತು ಇಂಟರ್ ನೆಟ್ ಚಟವನ್ನೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೀನಾ: ಇಂಟರ್ನೆಟ್ ದುಶ್ಚಟ ಬಿಡಲು ಇಲ್ಲೊಬ್ಬ ವಿದ್ಯಾರ್ಥಿ ತನ್ನ ಕೈಯನ್ನೇ ಕತ್ತರಿಸಿಕೊಂಡಿದ್ದಾನೆ!

ವಿಪರೀತ ಇಂಟರ್ ನೆಟ್ ದುಶ್ಚಟ ಬಿಡಲು ಮನಸ್ಸು ಒಪ್ಪದೆ, ಶಿಕ್ಷಕರು ಮತ್ತು ಪೋಷಕರಿಂದ ನಿಂದನೆಯಿಂದ ಬೇಸತ್ತು ಇಂಟರ್ ನೆಟ್ ಚಟವನ್ನೇ ಸಂಪೂರ್ಣವಾಗಿ ತೊರೆಯಲು ವಿದ್ಯಾರ್ಥಿಯೊಬ್ಬ ತನ್ನ ಕೈಯನ್ನೇ ಕತ್ತರಿಸಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ.

19 ವರ್ಷದ ವಿದ್ಯಾರ್ಥಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತನ್ನ ಎಡಗೈಯನ್ನು ಕತ್ತರಿಸಿಕೊಂಡಿದ್ದಾನೆ. ತಕ್ಷಣ ಆತನನ್ನು ತುಂಡಾದ ಕೈ ಭಾಗದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಕೈ ಮರು ಜೋಡಿಸಿರುವ ವೈದ್ಯರು ಮುಂಚಿನಂತೆ ಅದು ಕಾರ್ಯ ನಿರ್ವಹಿಸುವ ಸಾಧ್ಯತೆ ಬಹಳ ಕಡಿಮೆ ಎಂದು ತಿಳಿಸಿದ್ದಾರೆ.

ಚೀನಾದ ಶೇ.14 ಮಂದಿ ಯುವ ಜನತೆ ಇಂಟರ್ ನೆಟ್ ದುಶ್ಚಟಕ್ಕೆ ಒಳಗಾಗಿದ್ದು, ತಮ್ಮ ಹೆಚ್ಚಿನ ಸಮಯವನ್ನು ಕಂಪ್ಯೂಟರ್ ಮುಂದೆಯೇ ಕಳೆಯುತ್ತಾರೆಂದು ಅಧ್ಯಯನವೊಂದು ತಿಳಿಸಿದೆ.

ಯುವ ಜನತೆ ಇದರಿಂದ ಹೊರ ಬರುವ ಸಲುವಾಗಿ ಶಾಲಾ- ಕಾಲೇಜುಗಳಲ್ಲಿ ಕೌನ್ಸೆಲಿಂಗ್ ಸಹ ನಡೆಸಲಾಗುತ್ತಿದ್ದು ಚೀನಾದಲ್ಲಿ ಪ್ರಸ್ತುತ 24 ಮಿಲಿಯನ್ ಮಂದಿ ಇಂಟರ್ ನೆಟ್ ಗೆ ಅಡಿಕ್ಟ್ ಆಗಿದ್ದಾರೆಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com