
ಲಂಡನ್: ತಮ್ಮ ಒತ್ತೆಯಲ್ಲಿರುವ ಜೋರ್ಡಾನ್‍ನ ಪೈಲಟ್‍ನನ್ನು ಇಸಿಸ್ ಉಗ್ರರು ಸಜೀವ ದಹನ ಮಾಡಿದ್ದಾರೆಯೇ?
ಪೈಲಟ್ ಮೊವಾಜ್ ಅಲ್-ಕಸೇಸ್‍ಬೆಹ್‍ರನ್ನು ಸಜೀವ ದಹನ ಮಾಡಿದ್ದೆನ್ನಲಾದ ವಿಡಿಯೋವನ್ನು ಉಗ್ರರು ವೆಬ್‍ಸೈಟ್‍ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅದಕ್ಕೂ ಮುನ್ನ ಪಂಜರವೊಂದರಲ್ಲಿ ಕಿತ್ತಳೆ ಬಣ್ಣದ ಬಟ್ಟೆ ತೊಟ್ಟು ಕಸೇಸ್‍ಬೆಹ್ ನಿಂತಿರುವ ದೃಶ್ಯವಿದೆ.
ಪೈಲೆಟ್ ನನ್ನು ಬಿಡುಗಡೆ ಮಾಡದಿದ್ದರೆ ತಮ್ಮ ಸೆರೆಯಲ್ಲಿರುವ ಎಲ್ಲ ಉಗ್ರರಿಗೂ ಗಲ್ಲುಶಿಕ್ಷೆ ವಿಧಿಸುವುದಾಗಿ ಇತ್ತೀಚೆಗಷ್ಟೇ ಜೋರ್ಡಾನ್ ಸರ್ಕಾರ ಇಸಿಸ್‍ಗೆ ಬೆದರಿಕೆ ಹಾಕಿತ್ತು.
Advertisement