ಆಪ್ ನಂಬಿಕೆದ್ರೋಹಿ ಪಕ್ಷ

ಮೋದಿ, ಕಾಳ ರಾತ್ರಿಯಲ್ಲಿ ಕಾಳ ಧನವನ್ನು ನಾವೆಂದೂ ಕಂಡು ಕೇಳಿರಲಿಲ್ಲ ಎಂದು ಮೂದಲಿಸಿದ್ದಾರೆ.ಸ್ವಿಸ್...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ದೆಹಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಟೀಕೆ
ನವದೆಹಲಿ
: ಮೋದಿ, ಕಾಳ ರಾತ್ರಿಯಲ್ಲಿ ಕಾಳ ಧನವನ್ನು ನಾವೆಂದೂ ಕಂಡು ಕೇಳಿರಲಿಲ್ಲ ಎಂದು ಮೂದಲಿಸಿದ್ದಾರೆ.ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ತಮ್ಮ ಬಳಿ ಇದೆ ಎಂದು ಪ್ರಪಂಚಕ್ಕೆ ಸಾರುವವರಿಗೆ ತಮ್ಮ ಹಣದ ಮೂಲವೇ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ ಮೋದಿ ಅವರು, ಆಪ್ ದೆಹಲಿ ಜನರ ನಂಬಿಕೆಗೆ ದ್ರೋಹ ಬಗೆದ ಪಕ್ಷಎಂದು ದೂರಿದರು.

ರೋಹಿಣಿಯಲ್ಲಿ ಮಂಗಳವಾರ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಆಮ್ ಆದ್ಮಿ ಪಕ್ಷ  ಮಧ್ಯರಾತ್ರಿ 2 ಕೋಟಿ ರುಪಾಯಿ ದೇಣಿಗೆ ಪಡೆದ ಪ್ರಕರಣವನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ 15 ವರ್ಷ ದೆಹಲಿಯನ್ನು ಹಾಳು ಮಾಡಿದೆ. ಮತ್ತೊಂದು ತಾತ್ಕಾಲಿಕ ಪಕ್ಷ (ಆಪ್) ಒಂದು ವರ್ಷ ವ್ಯರ್ಥ ಮಾಡಿ ದೆಹಲಿಯನ್ನು 16 ವರ್ಷ ಹಿಂದಕ್ಕೆ ಕೊಂಡೊಯ್ದಿದೆ. ದೆಹಲಿ ಆಡಳಿತ ಅಂತಹ ಸುಳ್ಳುಗಾರರು, ಮೋಸಗಾರರ ಕೈಗೆ ಸಿಗಬೇಕೋ, ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಾಮಾಣಿಕ ಪಕ್ಷಕ್ಕೆ ಸಿಗಬೇಕೋ ನೀವೇ ನಿರ್ಧರಿಸಿ ಎಂದರು. ರಾಷ್ಟ್ರ ತಪ್ಪುಗಳನ್ನು ಕ್ಷಮಿಸುತ್ತದೆ ಆದರೆ ದ್ರೋಹವನ್ನೆಂದೂ ಕ್ಷಮಿಸುವುದಿಲ್ಲ. ರಾಜೀವ್‍ಗಾಂ„ ವಿಶ್ವಕ್ಕೆ ತಾವು ಮಿಸ್ಟರ್ ಕ್ಲೀನ್ ಎಂದು ಬಿಂಬಿಸುತ್ತಾ ತಮಗೆ ತಾವೇ ದ್ರೋಹ ಮಾಡಿಕೊಂಡರು ಎಂದು ಮೋದಿ ಟೀಕಿಸಿದರು.

ಬಿಜೆಪಿಯಲ್ಲಿ ಚೇತರಿಕೆ
ಆರಂಭದಿಂದಲೂ ಮೇಲುಗೈ ಸಾಧಿಸಿಕೊಂಡು ಬಂದಿರುವ ಆಪ್‍ಗೆ ತಿರುಗೇಟು ನೀಡಲು ಖುದ್ದು ಪ್ರಧಾನಿ ಮೋದಿ ಅವರೇ ಪ್ರಚಾರಕ್ಕೆ ಇಳಿದಿದ್ದಾರೆ. ರೋಹಿಣಿಯಲ್ಲಿನ ಪ್ರಚಾರ ರ್ಯಾಲಿ ಅವರ ಕೊನೆ ರ್ಯಾಲಿ. ಇದುವರೆಗೆ ನಡೆದ ಮೂರು ರ್ಯಾಲಿಗಳಿಂದಾಗಿ ಬಿಜೆಪಿ ಕೊಂಚ ಚೇತರಿಸಿಕೊಂಡಂತಿದೆ. ಮೋದಿ ರ್ಯಾಲಿಗಳ ನಂತರ ಬಿಜೆಪಿ ಕಾರ್ಯಕರ್ತರೂ ಚುರುಕಾಗಿದ್ದಾರೆ. ಕೊನೆ ಕ್ಷಣದಲ್ಲಿ ಬೇಡಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದರಿಂದಾಗಿ ಬಿಜೆಪಿ ಆಂತರಿಕ ವಲಯದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಪ್ರಮುಖ ನಾಯಕರೆಲ್ಲರೂ ನಿರುತ್ಸಾಹ ತಳೆದಿದ್ದರು, ಕೆಲವರಂತೂ ಅಸಹಕಾರ ಚಳವಳಿಗೆ ಇಳಿದಿದ್ದರು.

ಬಿಜೆಪಿ ವರಿಷ್ಠರಿಗೆ ಆರಂಭದಲ್ಲಿ ಈ ಅಸಮಾಧಾನ ನಿವಾರಿಸಲೇ 2-3 ದಿನಗಳು ಬೇಕಾದವು. ನಿರ್ಣಾಯಕ ಹಂತದಲ್ಲಿ ಆಪ್ ಈ ಸಮಯವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಜನರನ್ನು ಮುಟ್ಟತೊಡಗಿತ್ತು. ಪ್ರಧಾನಿ ಖುದ್ದು ಪ್ರಚಾರಕ್ಕೆ ಇಳಿದಿದ್ದರಿಂದಾಗಿ ಬಿಜೆಪಿಯಲ್ಲೂ ಹೊಸ ಉತ್ಸಾಹ ತುಂಬಿದೆ. ಪ್ರಚಾರಕ್ಕೆ ಇನ್ನು ಎರಡು ದಿನ ಮಾತ್ರ ಉಳಿದಿದೆ.

ಈ ನಡುವೆ, ಆಮ್ ಆದ್ಮಿ ಪಕ್ಷ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಸ್ಪರ್„ಸಿರುವ ಕೃಷ್ಣ ನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಶತಾಯಗತಾಯ ಕಿರಣ್ ಬೇಡಿ ಅವರನ್ನು ಸೋಲಿಸಬೇಕು ಎಂಬುದು ಆಪ್‍ನ ಒಂದಂಶದ ಕಾರ್ಯಕ್ರಮ. ಆಪ್‍ಗೆ ಅತಪ್ತ ಬಿಜೆಪಿ ನಾಯಕರೂ ಬೆಂಬಲ ನೀಡುತ್ತಿದ್ದಾರೆಂಬ ವದಂತಿಗಳ ಹಿನ್ನೆಲೆಯಲ್ಲಿ ಖುದ್ದು ಅಮಿತ್ ಶಾ ಅವರೇ ಕ್ಷೇತ್ರದ ನಿಗಾ ವಹಿಸಿದ್ದಾರೆ.

ಚುನಾವಣೆಗೆ ಮುನ್ನವೇ ಬಹುತೇಕ ಸೋಲೊಪ್ಪಿರುವ ಕಾಂಗ್ರೆಸ್ ಪರೋಕ್ಷವಾಗಿ ಆಪ್‍ಗೆ ಬೆಂಬಲ ನೀಡುತ್ತಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಆಪ್ ಅನ್ನು ಬೆಂಬಲಿಸುವುದು ಅದರ ಕಾರ್ಯತಂತ್ರ.

ಆಪ್‍ಗೆ ದೆಹಲಿ ಗದ್ದುಗೆ?
ಆಮ್ ಆದ್ಮಿ ಪಕ್ಷದ ಪರ ದೆಹಲಿ ಮತದಾರರ ಒಲವು ಕಡಿಮೆಯಾಗಿಲ್ಲವೇ? ಇಲ್ಲ ಎನ್ನುತ್ತಿವೆ ಸಮೀಕ್ಷೆಗಳು. ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನೇನು 3 ದಿನಗಳು ಬಾಕಿ ಇರುವಾಗಲೇ ಮೂರು ಸಮೀಕ್ಷೆಗಳ ಫಲಿತಾಂಶ ಮಂಗಳವಾರ ಹೊರಬಿದ್ದಿದೆ. ಈ ಸಮೀಕ್ಷೆಗಳ ಪ್ರಕಾರ, ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಎಲ್ಲ ಪಕ್ಷಗಳಿಗಿಂತಲೂ ಮುಂದಿವೆ. ಕಳೆದ ಚುನಾವಣೆಯ ಬಳಿಕ ದೆಹಲಿ ಗದ್ದುಗೆಯೇರಿದ್ದ ಕೇಜ್ರಿವಾಲ್ ಅವರು 49 ದಿನ ಅ„ಕಾರದಲ್ಲಿದ್ದರೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಿದ್ದು ಆಪ್ ಪರ ಗಾಳಿ ಬೀಸಲು ಕಾರಣ ಎನ್ನುವುದು ವಿಶ್ಲೇಷಕರ ವಾದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com