ಸ್ಪೈಸ್ ಜೆಟ್‌ಗೆ ಸವಾಲಾಗಿ ಇಂಡಿಗೋ ದರ ಕಡಿತ: ಸೂಪರ್ ಕೊಡುಗೆ ರು. 1499!
ನವದೆಹಲಿ: ಸ್ಪೈಸ್ ಜೆಟ್ ಆರಂಭಿಸಿರುವ ವಿಮಾನ ಪ್ರಯಾಣ ದರ ಕಡಿತ ಸಮರಕ್ಕೆ ಪ್ರತಿಯಾಗಿ ಇಂಡಿಗೋ ಏರ್‌ಲೈನ್ಸ್ ಕೂಡ ದರ ಕಡಿತಕ್ಕೆ ಮುಂದಾಗಿದ್ದು, ಸ್ಪೈಸ್ ಜೆಟ್ ಪ್ರಕಟಿಸಿರುವ ಸ್ಪೆಶಲ್ ವೆಲೆಂಟೈನ್ ಕೊಡುಗೆ ದರ 1,599ಕ್ಕೆ ಪ್ರತಿಯಾಗಿ ಇಂಡಿಗೋ ತನ್ನ ಸೂಪರ್ ಕೊಡುಗೆ ದರವನ್ನು 1,499 ರು.ಗಳಿಗೆ ನಿಗದಿ ಪಡಿಸಿದೆ.
ಇಂಡಿಗೋ ಪ್ರಕಟಿಸಿರುವ ದರಗಳು ನವದೆಹಲಿ ಮತ್ತು ಜೈಪುರದಂತಹ ಆಯ್ದ ಮಾರ್ಗಗಳ ಪ್ರಯಾಣಕ್ಕೆ ಮಾತ್ರ ಸಂಬಂಧಿಸಿವೆ. ಅಲ್ಲದೆ ಕೊಡುಗೆ ಪ್ರಯಾಣ ದಿನಾಂಕಕ್ಕೆ 90 ದಿನಗಳ ಮೊದಲಿನ ಬುಕ್ಕಿಂಗ್‌ಗೆ ಅನ್ವಯವಾಗಲಿದೆ.
ಸ್ಪೈಸ್ ಜೆಟ್‌ನ ಕೊಡುಗೆಗಳು ಫೆಬ್ರವರಿ 6ರ ವರೆಗಿದ್ದು, ಫೆಬ್ರವರಿ 14ರಿಂದ ಎಪ್ರಿಲ್ 15, 2015ರ ವರೆಗಿನ ಅವಧಿಯ ಪ್ರಯಾಣಕ್ಕೆ ಮಾತ್ರ ಸಂಬಂಧಿಸಿರುತ್ತವೆ.
ನಗದು ಕೊರತೆಯ ಫಲವಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಷ್ಟದಲ್ಲಿದ್ದ ಸ್ಪೈಸ್ ಜೆಟ್ ಕೆಲ ಕಾಲ ತನ್ನ ವಾಯು ಯಾನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಅನಂತರದಲ್ಲಿ ಸಹ ಸಂಸ್ಥಾಪಕ ಅಜಯ್ ಸಿಂಗ್ ನೇತೃತ್ವದ ಹೊಸ ಆಡಳಿತದಲ್ಲಿ ಪುನರಾರಂಭಗೊಂಡಿದ್ದ ಸ್ಪೈಸ್ ಜೆಟ್ ವಿಮಾನ ಯಾನ ಸೇವೆಯು ತನ್ನ ದರ ಕಡಿತದ ಕೊಡುಗೆಗಳೊಂದಿಗೆ ಮತ್ತೆ ಸ್ಪರ್ಧೆಯಲ್ಲಿ ಶಕ್ತಿ ಪಡೆದುಕೊಂಡಿತ್ತು.
ಸ್ಪೈಸ್ ಜೆಟ್ ತನ್ನ ಸೂಪರ್ ಸೇಲ್ ಕೊಡುಗೆಯಲ್ಲಿ ಐದು ಲಕ್ಷ ಸೀಟುಗಳನ್ನು ಪ್ರಯಾಣಿಕರಿಗೆ ಒದಗಿಸಿದೆ. ಕಳೆದ ಜನವರಿ 28ರಂದು ಈ ಸೂಪರ್ ಸೇಲ್ ಕೊಡುಗೆ ಆರಂಭಿಸಿದ್ದ ಸ್ಪೈಸ್ ಜೆಟ್‌ನ ಬುಕ್ಕಿಂಗ್‌ಗಳು ಶೇ.400ರಷ್ಟು ಹೆಚ್ಚಾಗಿವೆ ಎಂದು ಸಂಸ್ಥೆಯು ಹೇಳಿಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ