ಇಶ್ರಾತ್ ನಕಲಿ ಎನ್‌ಕೌಂಟರ್: ಡಿಜಿ ವಂಜಾರಾ, ಪಿಪಿ ಪಾಂಡೆಗೆ ಜಾಮೀನು

ಡಿಜಿ ವಂಜಾರಾ, ಪಿಪಿ ಪಾಂಡೆ
ಡಿಜಿ ವಂಜಾರಾ, ಪಿಪಿ ಪಾಂಡೆ

ಅಹಮದಾಬಾದ್: 2004ರ ಇಶ್ರಾತ್ ಜಹಾನ್ ಹತ್ಯೆ ಮತ್ತು 2005ರ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್ ಕೌಂಟರ್ ಪ್ರಕರಣ ಸಂಬಂಧ ಗುಜರಾತ್ ನ ವಿವಾದಾತ್ಮಕ ಪೊಲೀಸ್ ಅಧಿಕಾರಿ ಡಿಜಿ ವಂಜಾರಾ ಅವರಿಗೆ ಅಹಮದಬಾದ್ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಗುಜರಾತ್ ಗೆ ಕಾಲಿಡದಂತೆ ಷರತ್ತು ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಪೊಲೀಸ್ ಅಧಿಕಾರಿಗಳ ವಿರುದ್ಧ ಚಾರ್ಜ್ಶೀಟ್ ದಾಖಲಾಗಿದೆ. ಎಂಟು ಆರೋಪಿಗಳ ಪೈಕಿ ಈ ಹಿಂದೆ ನಾಲ್ವರಿಗೆ ಜಾಮೀನು ಮಂಜೂರಾಗಿದ್ದು, ಇಂದು ವಂಜಾರಾ ಸೇರಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಪಿ.ಪಿ. ಪಾಂಡೆ ಅವರಿಗೂ ಜಾಮೀನು ಸಿಕ್ಕಿದೆ.

ಸೊಹ್ರಾಬುದ್ದೀನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2007 ಮಾರ್ಚ್ನಲ್ಲಿ ಬಂಧನಕ್ಕೀಡಾಗಿದ್ದ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿದ್ದ ವಂಜಾರಾ ಕಳೆದ ಎಂಟು ವರ್ಷದಿಂದ ಅಹಮದಾಬಾದ್ ಜೈಲಿನಲ್ಲಿದ್ದು, ಇಂದು ಅಥವಾ ನಾಳೆ ಜೈಲಿನಿಂದ ಹೊರ ಬರಲಿದ್ದಾರೆ.

ಇದೇ ವೇಳೆ, ಇಶ್ರಾತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಸ್ಪೆಂಡ್ ಆಗಿರುವ ಎಪಿಎಸ್ ಅಧಿಕಾರಿ ಪಿ.ಪಿ ಪಾಂಡೆ ಅವರಿಗೂ ಜಾಮೀನು ಸಿಕ್ಕಿದೆ. ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಸೇರಿ ಮತ್ತಿಬ್ಬರ ಶ್ಯೂರಿಟಿ ಬಾಂಡ್ ನೀಡುವಂತೆ ವಿಶೇಷ ನ್ಯಾಯಮೂರ್ತಿ ಕೆ.ಆರ್ ಉಪಾಧ್ಯಾಯ ಅವರು ಸೂಚಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com