
ನವದೆಹಲಿ: ಅತ್ತೆಯೊಬ್ಬಳು ಸೊಸೆಗೆ ಇಂತಹ ಭಾರಿ ಉಡುಗೊರೆ ನೀಡಿದ್ದು ಎಲ್ಲಾದರೂ ಇದೆಯೇ ? ಸನ್ ಫಾರ್ಮಾ ಕಂಪನಿ ಸ್ಥಾಪಕ ದಿಲೀಪ್ ಶಾಂಘ್ವಿ ವರ ತಾಯಿ ಕುಮುದಾ ತನ್ನ ಸೊಸೆಗೆ ನೀಡಿದ ಉಡುಗೊರೆ ಏನೆಂದು ಕೇಳಿದರೆ ನೀವು ಅಚ್ಚರಿಗೊಳ್ಳುತ್ತೀರಿ. ಅದು ಬರೋಬ್ಬರಿ ರು. 280 ಕೋಟಿ ಮೌ ಲ್ಯದ ಷೇರುಗಳು. ಅತ್ತೆ ಕುಮುದಾ ಜ.30ರಂದು ತಲಾ ರು. 915.95 ಮುಖಬೆಲೆಯ 30.80 ಲಕ್ಷ ಷೇರುಗಳನ್ನು ತನ್ನ ಸೊಸೆ ವಿಭಾ ಅವರಿಗೆ ವರ್ಗಾಯಿಸಿದ್ದಾರೆ.ಹೀಗಾಗಿ ಫಾರ್ಮಾ ಕಂಪನಿಯಲ್ಲಿ ಕುಮುದಾರ ಷೇರುಗಳ ಪ್ರಮಾಣ ಶೇ.0.01ಕ್ಕಿಳಿದರೆ, ವಿಭಾ ಅವರ ಷೇರುಗಳು ಶೇ.0.43ಕ್ಕೇರಿದಂತಾಗಿದೆ. ಮುಕೇಶ್ ಅಂಬಾನಿ ಬಳಿಕ ದೇಶದ ಎರಡನೇ ಶ್ರೀಮಂತ ಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ದಿಲೀಪ್ ಶಾಂಘ್ವಿ ಪಾತ್ರರಾಗಿದ್ದಾರೆ.
Advertisement