
ನ್ಯೂಯಾರ್ಕ್: ಭಾರತದ ಬಲಪಂಥೀಯ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವನ್ನು `ವಿದೇಶಿ ಭಯೋತ್ಪಾದನಾ ಸಂಘಟನೆ' ಎಂದು ಘೋಷಿಸುವಂತೆ ಕೋರಿ ಸಿಖ್ ಹಕ್ಕುಗಳ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಏಪ್ರಿಲ್‍ನಲ್ಲಿ ನಡೆಸಲು ಅಮೆರಿಕದ ಕೋರ್ಟ್ ನಿರ್ಧರಿಸಿದೆ. ಬುಧವಾರ ಅರ್ಜಿಯ ವಿಚಾರಣೆಗೆ ಒಪ್ಪಿದ ನ್ಯಾಯಾಲಯ, ಏ. 24ರಂದು ವಿಚಾರಣೆ ಆರಂಭಿಸುವುದಾಗಿ ಹೇಳಿದೆ. ಆರೆಸ್ಸೆಸ್ ಭಾರತದಲ್ಲಿ ಫ್ಯಾಸಿಸ್ಟ್ ಸಿದ್ಧಾಂತವನ್ನು ಅನುಸರಿಸುತ್ತಿದ್ದು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಿಸಲು ಹಿಂಸೆಯ ಹಾದಿ ತುಳಿದಿದೆ. ಜತೆಗೆ ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಿದೆ. ಹಾಗಾಗಿ ಇದನ್ನು ವಿದೇಶಿ ಉಗ್ರ ಸಂಘಟನೆ ಎಂದು ಘೋಷಿಸಬೇಕು ಎಂದು ಸಿಖ್ ಫಾರ್ ಜಸ್ಟಿಸ್ ಸಂಸ್ಥೆ ಅರ್ಜಿಯಲ್ಲಿ ಕೋರಿತ್ತು.
Advertisement