ಗೋಹತ್ಯೆ ವಿರುದ್ಧ ಗೂಂಡಾ ಕಾಯ್ದೆ

ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಗೋಹತ್ಯೆ ಕುರಿತಂತೆ ಗೂಂಡಾ ಕಾಯ್ದೆಯೊಂದನ್ನು...
ಗೋಹತ್ಯೆ ವಿರುದ್ಧ ಗೂಂಡಾ ಕಾಯ್ದೆ

ಲಕನೌ: ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಗೋಹತ್ಯೆ ಗೂಂಡಾ ಕಾಯ್ದೆಯೊಂದನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಉತ್ತರ ಪ್ರದೇಶದ ಉನ್ನತಾಧಿಕಾರಿಗಳು, ಗೋಹತ್ಯೆ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ದಾಖಲು ಮಾಡಲು ಕಾಯ್ದೆಯನ್ನು ತಿದ್ದುಪಡಿಗೆ ರಾಜ್ಯಪಾಲ ರಾಮ್ ನಾಯ್ಕ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಗೋಹತ್ಯೆ ಮಾಡುವವರ ವಿರುದ್ಧ ಪರಿಣಾಮಕಾರಿ ಕಾನೂನು ಜಾರಿಯಾಗಲಿದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ಕೂಡ ಹೇಳಿದ್ದಾರೆ.

ಜೂಜುಕೋರರು, ಬಾಲಕಾರ್ಮಿಕರು, ಅಕ್ರಮ ಮರ ಕಡಿತ, ಕಳ್ಳ ಬಟ್ಟಿ ವ್ಯಾಪಾರಿಗಳು, ಅತ್ಯಾಚಾರಿಗಳು, ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟಗಾರರ ವಿರುದ್ಧ ದಾಖಲಾಗುತ್ತಿದ್ದ ಗೂಂಡಾ ಕಾಯ್ದೆ ಇನ್ನು ಮುಂದೆ ಗೋಹತ್ಯೆ ಮಾಡುವವರ ವಿರುದ್ಧವೂ ದಾಖಲಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com