ಪ್ರೇಮ ವಿವಾಹಕ್ಕೆ ಹೆತ್ತವರ ಉಪಸ್ಥಿತಿ, ಒಪ್ಪಿಗೆ ಅನಗತ್ಯ: ಕೋರ್ಟ್‌

ಪ್ರೇಮ ವಿವಾಹ
ಪ್ರೇಮ ವಿವಾಹ

ಮಧುರೆ: ಪ್ರೇಮ ವಿವಾಹವಾಗುವವರಿಗೆ ಇನ್ನು ಮುಂದೆ ಯಾವುದೇ ಭಯ, ಆತಂಕ ಪಡುವ ಅವಶ್ಯಕತೆ ಇಲ್ಲ.

ಪ್ರೇಮ ವಿವಾಹ ಆಗುವವರು ಹಾಗೂ ತಮ್ಮ ವಿವಾಹದ ನೋಂದಣಿ ಮಾಡಿಕೊಳ್ಳುವವರಿಗೆ ಹೆತ್ತವರ ಒಪ್ಪಿಗೆ, ಉಪಸ್ಥಿತಿಯ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.  

ಮರ್ಯಾದಾ ಹತ್ಯೆ, ಅಪಹರಣ, ಆತ್ಮಹತ್ಯೆ, ಜಾತಿ ಸಂಘರ್ಷಗಳನ್ನು ತಡೆಯುವ ಸಲುವಾಗಿ ಹೆತ್ತವರ ಒಪ್ಪಿಗೆ ಮತ್ತು ಉಪಸ್ಥಿತಿ ಇಲ್ಲದಿರುವ ಪ್ರೇಮ ವಿವಾಹಗಳನ್ನು ನಡೆಸಿಕೊಡದಂತೆ ಸರಕಾರಕ್ಕೆ ಆದೇಶ ನೀಡಬೇಕೆಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಮದುವೆ ನೋಂದಣಿ ಅಧಿಕಾರಿಗಳು ಮತ್ತು ದೇವಸ್ಥಾನಗಳಲ್ಲಿನ ಅರ್ಚಕರು, ಹೆತ್ತವರ ಅನುಮತಿ ಮತ್ತು ಉಪಸ್ಥಿತಿ ಇಲ್ಲದಿರುವ ಪ್ರೇಮ ವಿವಾಹಗಳನ್ನು ನಡೆಸಿಕೊಡದಂತೆ ತಮಿಳುನಾಡು ಸರಕಾರಕ್ಕೆ ಆದೇಶ ನೀಡಬೇಕೆಂದು ಈ ಅರ್ಜಿಯಲ್ಲಿ ಕೋರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com