
ನವದೆಹಲಿ: ಕರ್ನಾಟಕದ ಮೈಸೂರು ಸೇರಿದಂತೆ ದೇಶದ 2,500 ಪಟ್ಟಣ ಮತ್ತು ನಗರಗಳಲ್ಲಿ ಬಿಎಸ್ಎನ್ಎಲ್ ನಿಂದ ಶೀಘ್ರದಲ್ಲೇ ವೈಫೈ ಸೌಲಭ್ಯ ಕಲ್ಪಿಸಲಾಗುತ್ತದೆ.
ಪ್ರಧಾನಿ ಮೋದಿಯವರ ಕ್ಷೇತ್ರ ವಾರಾಣಸಿಯ ನ.8ರಂದು ದಶಾಶ್ವಮೇಧ ಘಾಟ್‍ನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರು ಚಾಲನೆ ನೀಡಲಿದ್ದಾರೆ. ವಾರಾಣಸಿ ಬಳಿಕ ಉಳಿದ 2,499 ನಗರಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಬಿಎಸ್ಎನ್ ಎಲ್ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಯೋಜನೆಯಡಿ ಆರಂಭದ ಕೆಲವು ನಿಮಿಷ ಸಾರ್ವಜನಿಕರು ಉಚಿತವಾಗಿ ವೈಪೈಸೌಲಭ್ಯ ಬಳಸಿಕೊಳ್ಳಬಹುದು.
ಆ ಬಳಿಕ ನಿಗದಿಪಡಿಸಿದ ಶುಲ್ಕ ಪಾವತಿಸಬೇಕಾಗುತ್ತದೆ. ಸಾರ್ವಜನಿಕರು ಯಾವುದೇ ಸಿಮ್ ಬಳಸುತ್ತಿದ್ದರೂ ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳ ಮೂಲಕ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು. ದೇಶಾದ್ಯಂತ ವೈಫೈ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮದ ಒಟ್ಟು ಅಂದಾಜು ವೆಚ್ಚ ರು.7 ಸಾವಿರ ಕೋಟಿ. ಯೋಜನೆಯಡಿ ಒಟ್ಟು 60 ಸಾವಿರ ಹಾಟ್ ಸ್ಪಾಟ್ ಗಳನ್ನು ಸೃಷ್ಟಿಸಲಾಗುತ್ತದೆ ಎಂದು ಬಿಎಸ್ಎನ್ಎಲ್ ಮಾಹಿತಿ ನೀಡಿದೆ.
Advertisement