40 ವರ್ಷ ಬಳಿಕ ಪಾಕ್ನಲ್ಲಿ ಬಿಡುಗಡೆಯಾಗ್ತಿದೆ ಶೋಲೇ

ಭಾರತೀಯ ಸಿನಿಮಾ ಇತಿಹಾಸ ದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದ ನಟ ಅಮಿತಾಬ್, ಧರ್ಮೇಂದ್ರ ಅಭಿನಯದ ಚಿತ್ರ...
ಶೋಲೆ ಚಿತ್ರದ ಪೋಸ್ಟರ್
ಶೋಲೆ ಚಿತ್ರದ ಪೋಸ್ಟರ್

ನವದೆಹಲಿ: ಭಾರತೀಯ ಸಿನಿಮಾ ಇತಿಹಾಸ ದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದ ನಟ ಅಮಿತಾಬ್, ಧರ್ಮೇಂದ್ರ ಅಭಿನಯದ ಚಿತ್ರ `ಶೋಲೇ' ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿದೆ!
ಹೌದು, ಅಚ್ಚರಿಯಾದರೂ ಇದು ನಿಜ. ಭಾರತ ದಲ್ಲಿ ಚಿತ್ರ ಬಿಡುಗಡೆಯಾದ ನಾಲ್ಕು ದಶಕಗಳ ಬಳಿಕ ಪಾಕ್ ಚಿತ್ರಮಂದಿರಗಳಲ್ಲಿ ಈಗ `ಗಬ್ಬರ್ ಸಿಂಗ್' ಅಬ್ಬರಿಸಲು ಸಿದ್ಧ ನಾಗಿದ್ದಾನೆ. ಮಾ .20ರಂದು ಪಾಕ್ನ ಬಹುತೇಕ ಚಿತ್ರಮಂದಿರ ಗಳಲ್ಲಿ `ಶೋಲೆ' ಬಿಡುಗಡೆಯಾಗಲಿದೆ. ಈ ಚಿತ್ರ ಬಿಡುಗಡೆಗೆ ಮೂಲ ಕಾರಣ ಮಂಡಿವಾಲಾ ಎಂಟರ್ಟೈನ್ಮೆಂಟ್ ಕಂಪನಿಯ ನದೀಂ  ಮಂಡೀವಾಲ ಅವರ ಆಸಕ್ತಿ. `ಶೋಲೆ'ಯನ್ನು ಪಾಕ್ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡ ಬೇಕೆಂಬುದು ನದೀಂ ಅವರ ಬಹುದಿನದ ಕನಸಾಗಿತ್ತಂತೆ. ಅದನ್ನೀಗ ಅವರು ಸಾಕಾರಗೊಳಿಸಲು ಹೊರಟಿದ್ದಾರೆ. ನದೀಂ ಈ ಚಿತ್ರವನ್ನು 20 ಬಾರಿ ವೀಕ್ಷಿಸಿದ್ದಾರಂತೆ. ಕಳೆದ ವರ್ಷ ಶೋಲೆ ಚಿತ್ರ 3ಡಿ ರೂಪದಲ್ಲಿ ಬಿಡುಗಡೆಯಾದಾಗ ನದೀಂ ಆ ಚಿತ್ರದ ಬಿಡುಗಡೆ ಹಕ್ಕು ಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅದು ಯಶಸ್ವಿಯಾಗಿರಲಿಲ್ಲ. ಆದರೆ, ಈಗ ಆ ಸಮಸ್ಯೆ ನಿವಾರಣೆಯಾಗಿದೆ. ಶೋಲೆ ಹಳೆಯ ಚಿತ್ರವಾಗಿರುವುದರಿಂದ
ಈಗಾಗಲೇ ಪಾಕ್ ಮಂದಿ ಈಗಾಗಲೇ ಅದನ್ನು ಡಿವಿಡಿ, ಯೂಟ್ಯೂಬ್ ಮೂಲಕ ನೋಡಿರುವ ಸಾಧ್ಯತೆ ಇದೆ. ಆದರೂ ಜನ ಸಿನಿಮಾ ಮಂದಿರಗಳಿಗೆ ಬರುತ್ತಾರೆ ಎನ್ನುವ ವಿಶ್ವಾಸ ನದೀಂ ಅವರ ದು. 1965ರ ಯುದ್ಧದ ಬಳಿಕ ಪಾಕ್ನಲ್ಲಿ ಭಾರತೀಯ ಚಿತ್ರಗಳ ಪ್ರದರ್ಶನ ಮೇಲೆ ನಿಷೇಧಹೇರಲಾಗಿತ್ತು. ಆದರೆ, 2006ರಲ್ಲಿ ಈ ನಿಷೇಧವ ನ್ನು ಆಗಿನ ಅಧ್ಯಕ್ಷ  ಜ. ಪರ್ವೇಜ್ ಮುಷರಫ್  ರದ್ದು ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com