ಹಿಂದುಗಳ ಆರಾಧ್ಯ ದೈವ 'ಗಣೇಶ'ನಲ್ಲಿ ನಂಬಿಕೆ ಇಟ್ಟ ಅಮೆರಿಕನ್ ಆಟಗಾರ

ಟಾಮ್ ಬ್ರಾಡಿ
ಟಾಮ್ ಬ್ರಾಡಿ

ವಾಷಿಂಗ್ಟನ್: ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಟೀಕಿಸಿದ್ದ ಬೆನ್ನಲ್ಲೆ ಇದೀಗ ಅಮೆರಿಕದ ಶ್ರೇಷ್ಠ ಪುಟ್‌ಬಾಲ್ ಆಟಗಾರನೊಬ್ಬ ಹಿಂದುಗಳ ಆರಾಧ್ಯ ದೈವ ಗಣೇಶನ ವಿಗ್ರಹವನ್ನು ತಮ್ಮ ಬಳಿ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ನಾಲ್ಕು ಹಿಂಚಿನ ಗಣೇಶನ ವಿಗ್ರಹವನ್ನು ತಮ್ಮ ಬಳಿ ಹೊಂದಿರುವ ಟಾಮ್ ಬ್ರಾಡಿ ಅವರು ಗಣೇಶನ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಅಡೆತಡೆ ನಿವಾರಕ ಗಣೇಶ ಎಂಬ ನಂಬಿಕೆ ಅವರದ್ದಾಗಿದೆ.

ಕಳೆದ ವಾರವಷ್ಟೇ ಬ್ರಾಡಿ ಅವರಿಗೆ ನಾಲ್ಕನೇ ಸೂಪರ್ ಬೌಲ್ ಪ್ರಶಸ್ತಿ ಲಭಿಸಿತ್ತು. ಈ ವೇಳೆ ಪತ್ರಕರ್ತರು ಬ್ರಾಡಿ ಅವರ ಲಾಕರ್ ಸುತ್ತಲೂ ಮುಗಿಬಿದ್ದರು. ಈ ವೇಳೆ ಬ್ರಾಡಿ ಅವರ ಲಾಕರ್‌ನಲ್ಲಿ ಗಣೇಶನ ವಿಗ್ರಹವಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಬ್ರಾಡಿ ನನ್ನ ಲಾಕರ್‌ನಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಗಣೇಶ ಅಡೆತಡೆಗಳ ನಿವಾರಕ ಎಂಬ ಮಾತನ್ನು ಹೇಳಿದ್ದಾರೆ.

ಹಿಂದೂ ದೇವತೆಗಳ ಮೇಲಿನ ಅಮೆರಿಕನ್ನರ ನಂಬಿಕೆ, ಆಚರಣೆ ಇಂದು ನಿನ್ನೆಯದಲ್ಲ. ಸ್ವತಃ ಒಬಾಮಾ ಅವರೇ ಅಮೆರಿಕ ಅಧ್ಯಕ್ಷೀಯ ಪ್ರಚಾರದ ವೇಳೆ ತಮ್ಮ ಬಳಿ ಹನುಮಂತನ ಪುಟ್ಟ ಲಾಕೇಟ್ ಇಟ್ಟುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com