ಜಿತನ್ ರಾಂ ಮಾಂಝಿ
ಜಿತನ್ ರಾಂ ಮಾಂಝಿ

ಪ್ರಧಾನಿ ಜತೆ ರಾಜಕೀಯ ವಿಷಯಗಳನ್ನು ಚರ್ಚಿಸಿಲ್ಲ: ಸಿಎಂ ಮಾಂಝಿ

ನವದೆಹಲಿ: ಬಿಹಾರ ರಾಜ್ಯದ ಅಭಿವೃದ್ಧಿ ಮತ್ತು ಸ್ವಚ್ಛತಾ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಾಗಿದೆ ಹೊರತು ರಾಜಕೀಯ ವಿಷಯಗಳ ಕುರಿತಲ್ಲ ಎಂದು ಜೆಡಿಯು ಪಕ್ಷದ ಹಾಲಿ ಸಿಎಂ ಜಿತನ್ ರಾಂ ಮಾಂಝಿಯವರು ಹೇಳಿದ್ದಾರೆ.

ಜೆಡಿಯು ನಾಯಕ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಬಿಹಾರದ ಸಿಎಂ ಗದ್ದುಗೆ ಏರಲು ನಡೆಸುತ್ತಿರುವ ಪ್ರಯತ್ನದ ಬೆನ್ನಲ್ಲೇ ಇಂದು ಜಿತನ್ ರಾಮ್ ಮಾಂಝಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು.

ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಂಝಿ 'ನಾನು ಪ್ರಧಾನ ಮಂತ್ರಿಯನ್ನು ಬಿಹಾರದ ಅಭಿವೃದ್ಧಿ ಮತ್ತು ರಾಜ್ಯದ ಸ್ವಚ್ಛತಾ ವಿಷಯದ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಜೆಡಿಯು ನಾಯಕ ನಿತೀಶ್ ಕುಮಾರ್ ತನ್ನನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಬಿಹಾರ ರಾಜ್ಯದ ಮಹಾದಲಿತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ, ನಿತೀಶ್ ಕುಮಾರ್ ಅವರು ಅಧಿಕಾರವಿಲ್ಲದೆ ಬದುಕಲಾರರು ಹೀಗಾಗಿ ನನ್ನನ್ನು ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ. ಇದರೊಂದಿಗೆ ನಿತೀಶ್ ರ ನಿಜಬಣ್ಣ ಬಯಲಾಗಿದೆ ಎಂದರು.

ನಿತೀಶ್ ಅವರನ್ನು ನನ್ನನ್ನು ರಬ್ಬರ್ ಸ್ಟಾಂಪ್ ಎಂದು ಭಾವಿಸಿದಂತಿದೆ. ಅದು ಅವರ ತಪ್ಪು ಕಲ್ಪನೆ ಎಂದು ಮಾಂಝಿ ಲೇವಡಿ ಮಾಡಿದ್ದಾರೆ. ನಾನು ಈಗಲು ಬಿಹಾರದ ಮುಖ್ಯಮಂತ್ರಿ. ನಾನು ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.

Related Stories

No stories found.

Advertisement

X
Kannada Prabha
www.kannadaprabha.com