ನವದೆಹಲಿ: ಮತಗಟ್ಟೆ ಸಮೀಕ್ಷೆ ಗಳು ಆಮ್ ಆದ್ಮಿ ಪಕ್ಷದ ಪರವಾಗಿದ್ದರೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಮಾತ್ರ ಫಲಿತಾಂಶ ಪ್ರಕಟವಾಗುವವರೆಗೆ ಕಾದು
ನೋಡಲು ನಿರ್ಧರಿಸಿದ್ದಾರೆ. ಫೆ .10ರಂದು ಪ್ರಕಟವಾಗಲಿರುವ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ ಎನ್ನುವುದು ನನ್ನ ಭಾವನೆ. ಒಂದು ವೇಳೆ ಬಿಜೆಪಿಯೇ ನಾದರೂ ಸೋತರೆ ಅದರ ಹೊಣೆಯನ್ನು ತಾನೇ ವಹಿಸಿಕೊಳ್ಳುವುದಾಗಿ ಬೇಡಿ ಘೋಷಿಸಿದ್ದಾರೆ.
ಪ್ರಿಯಾಂಕ ವಿಶ್ವಾಸ: ಏತನ್ಮಧ್ಯೆ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಮುಖ ಪ್ರತಿಸ್ಪರ್ಧಿ ಯಾಗಿದೆ. ಜತೆಗೆ, ಸಂಕಷ್ಟದ ದಿನಗಳಿಂದ ಕಾಂಗ್ರೆಸ್ ಹೊರಬರಲಿ ದೆ ಎಂಬ ವಿಶ್ವಾಸವನ್ನೂ ಪ್ರಿಯಾಂಕ ಗಾಂಧಿ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಈ ಹಿಂದೆ ಸಂಕಷ್ಟದ ದಿನಗಳ ನ್ನು ಎದುರಿಸಿದೆ. ಈ ಹಿಂದೆಯೂ ಪಕ್ಷ ಇಂಥ ಸ್ಥಿತಿ ಯಿಂದ ದ ಯಶಸ್ವಿಯಾಗಿ ಹೊರಬಂದಿದೆ. ಈ ಬಾರಿಯೂ ಪಕ್ಷ ಅದೇ ರೀತಿ ಸಂಕಷ್ಟಗಳಿಂದ ಹೊರಬಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ
Advertisement