ಈಜಿಪ್ಟ್‌ನಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ: 25 ಸಾವು

ವಾಯುರಕ್ಷಣಾ ಕ್ರೀಡಾಂಗಣದಲ್ಲಿ ನಡೆದ ಈಜಿಪ್ಟ್ ಪ್ರಿಮಿಯರ್ ಲೀಗ್ ಫುಟ್ಬಾ ಲ್ ಪಂದ್ಯಾವಳಿ ವೇಳೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ಫುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ
ಫುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ

ಕೈರೋ: ವಾಯುರಕ್ಷಣಾ ಕ್ರೀಡಾಂಗಣದಲ್ಲಿ ನಡೆದ ಈಜಿಪ್ಟ್ ಪ್ರಿಮಿಯರ್ ಲೀಗ್ ಫುಟ್ಬಾ ಲ್ ಪಂದ್ಯಾವಳಿ ವೇಳೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ 25 ಮಂದಿ ಸಾವಿಗೀಡಾಗಿದ್ದಾರೆ.

ಜಮಾಲೇಕ್ ಮತ್ತು ಇಎನ್‌ಪಿಪಿಐ ಮಧ್ಯೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಟಿಕೆಟ್ ಸಿಗದ ಕಾರಣ ಜಮಾಲೇಕ್ ತಂಡದ ಅಭಿಮಾನಿಗಳು ಟಿಕೆಟ್ ಇಲ್ಲದೆ ಅನಧಿಕೃತವಾಗಿ ಕ್ರೀಡಾಂಗಣ ಪ್ರವೇಶಿಸಲು ಮುಂದಾಗಿದ್ದಾರೆ. ಇದಕ್ಕೆ ಆಸ್ಪದ ನೀಡದ್ದರಿಂದ ಉದ್ರಿಕ್ತಗೊಂಡ ಅಭಿಮಾನಿಗಳು ದೊಂಬಿ ಎಬ್ಬಿಸಿದ್ದಾರೆ. ಈ ಘರ್ಷಣೆಯಲ್ಲಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೀಡಾಂಗಣದಲ್ಲಿ ಸುಮಾರು 30 ಸಾವಿರ ಜನರು ಕುಳಿತುಕೊಳ್ಳಲು ಆಸನಗಳಿದ್ದು, ಕೇವಲ 10 ಸಾವಿರ ಟಿಕೆಟ್‌ಗಳನ್ನು ಅಭಿಮಾನಿಗಳಿಗೆ ನೀಡಲು ಆಂತರಿಕ ಸಚಿವಾಲಯ ನಿರ್ಧರಿಸಿತ್ತು. ಇದೇ ಹಿಂಸಾಚಾರಕ್ಕೆ ತಿರುಗಲು ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com