ಆಂಗ್ಲ ಮಾಧ್ಯಮ ಶಾಲೆಗೆ ದಾಖಲಿಸಲು ನಿರಾಕರಣೆ: ವಿದ್ಯಾರ್ಥಿ ಆತ್ಮಹತ್ಯೆ

ಆಂಗ್ಲ ಮಾಧ್ಯಮ ಶಾಲೆಗೆ ಪೋಷಕರು ಸೇರಿಸಿಲ್ಲ ಎಂದು ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದ್ರಾಬಾದ್‌ನ ಬೊರಬಂದ...
ಆಂಗ್ಲ ಮಾಧ್ಯಮ ಶಾಲೆಗೆ  ದಾಖಲಿಸಲು ನಿರಾಕರಣೆ: ವಿದ್ಯಾರ್ಥಿ ಆತ್ಮಹತ್ಯೆ

ಹೈದ್ರಾಬಾದ್: ಆಂಗ್ಲ ಮಾಧ್ಯಮ ಶಾಲೆಗೆ ಪೋಷಕರು ಸೇರಿಸಿಲ್ಲ ಎಂದು ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದ್ರಾಬಾದ್‌ನ ಬೊರಬಂದ ಸಮೀಪವಿರುವ ಬಬ್ಬುಗುಡ ಪ್ರದೇಶದಲ್ಲಿ ನಡೆದಿದೆ.

ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯು ತನ್ನ 10ನೇ ತರಗತಿ ವ್ಯಾಸಂಗವನ್ನು ಆಂಗ್ಲ ಭಾಷಾ ಮಾಧ್ಯಮ ಶಾಲೆಯಲ್ಲಿ ಮಾಡಬೇಕು ಎಂಬ ಇಚ್ಛೆ ಹೊಂದಿದ್ದನು. ಆದರೆ, ಆತನ ಪೋಷಕರು ಕಡು ಬಡವರಾಗಿದ್ದು, ದಿನಗೂಲಿ ಮಾಡುತ್ತಿದ್ದರು.

ತಮ್ಮ ಬಳಿ ಹಣವಿಲ್ಲದ ಕಾರಣ ಪೋಷಕರು ತಮ್ಮ ಮಗನನ್ನು ಆಂಗ್ಲ ಭಾಷಾ ಮಾಧ್ಯಮ ಶಾಲೆಗೆ ದಾಖಲಿಸಲು ನಿರಾಕರಿಸಿದ್ದಾರೆ. ಆಂಗ್ಲ ಭಾಷಾ ಮಾಧ್ಯಮಕ್ಕೆ ಸೇರಿಸಬೇಕಾದರೆ, ಹೆಚ್ಚು ಹಣ ಬೇಕು. ಆದರೆ, ದಿನಗೂಲಿ ಮಾಡುವವರು ನಾವು. ನಮ್ಮ ಬಳಿ ಅಷ್ಟು ಹಣವಿಲ್ಲ. ನೀನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸು ಎಂದು ಬಾಲಕನಿಗೆ ಪೋಷಕರು ಬುದ್ಧಿಮಾತು ಹೇಳಿದ್ದಾರೆ.

ಆದರೆ, ಪೋಷಕರ ಮಾತಿನಿಂದ ಬೇಸರಗೊಂಡ ವಿದ್ಯಾರ್ಥಿ ಆಂಗ್ಲಭಾಷಾ ಮಾಧ್ಯಮ ಶಾಲೆಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ ಎಂದು ಮನನೊಂದು ವಿದ್ಯಾರ್ಥಿ, ಪೋಷಕರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸನಾತ್ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲಿನ ಸ್ಥಳೀಯರ ಪ್ರಕಾರ ವಿದ್ಯಾರ್ಥಿ ಬಹಳ ಬುದ್ದಿವಂತನಾಗಿದ್ದನು. ಓದುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದನು. ಶಾಲೆಯ ಪ್ರಥಮ ಸ್ಥಾನ ಗಳಿಸುತ್ತಿದ್ದ ವಿದ್ಯಾರ್ಥಿ ಈತ. ಆತನ ಕೆಲವು ಗೆಳೆಯರು ಆಂಗ್ಲ ಭಾಷಾ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರೊಂದಿಗೆ ಯಾವಾಗಲೂ ಚರ್ಚೆಯಲ್ಲಿ ತೊಡಗಿರುತ್ತಿದ್ದನು. ಹೀಗಾಗಿ ಆತನಿಗೆ ಆಂಗ್ಲ ಮಾಧ್ಯಮದತ್ತ ಒಲವು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com