ವಾರಾಣಸಿಯಲ್ಲಿ ಶುರುವಾಯ್ತು ಬಿಎಸ್ಸೆನ್ನೆಲ್ ವೈ-ಫೈ ಸೇವೆ

ಮೈಸೂರು ಮಾತ್ರವಲ್ಲದೆ ಸದ್ಯದಲ್ಲೇ ಕರ್ನಾಟಕದ ಹಂಪಿ, ಆಗ್ರಾದ ತಾಜ್ ಮಹಲ್, ಮಹಾಬಲಿಪುರಂ...
ವಾರಾಣಸಿಯಲ್ಲಿ ಶುರುವಾಯ್ತು ಬಿಎಸ್ಸೆನ್ನೆಲ್ ವೈ-ಫೈ ಸೇವೆ

ವಾರಾಣಸಿ: ಮೈಸೂರು ಮಾತ್ರವಲ್ಲದೆ ಸದ್ಯದಲ್ಲೇ ಕರ್ನಾಟಕದ ಹಂಪಿ, ಆಗ್ರಾದ ತಾಜ್ ಮಹಲ್, ಮಹಾಬಲಿಪುರಂ, ಸಾರಾನಾಥ್ ಸೇರಿದಂತೆ ದೇಶದ ಎಂಟು ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲೂ ಉಚಿತ ವೈಫೈ ಸೇವೆ ಆರಂಭಿಸಲು ಬಿಎಸ್ಎನ್ಎಲ್ ನಿರ್ಧ ರಿಸಿದೆ.

ದೇಶದಲ್ಲಿ ಬಿಎಸ್ಎನ್ ನೆಲ್‍ನ ಮೊದಲ ಉಚಿತ ವೈಫೈ ಸೇವೆಯನ್ನು ವಾರಾಣಸಿಯ ದಶಾಶ್ವಮೇಧ ಘಾಟ್ ಮತ್ತು ಶೀತಲ ಘಾಟ್ ನಲ್ಲಿ ಭಾನುವಾರ ಉದ್ಘಾಟಿಸಿದ ಕೇಂದ್ರ ದೂರ-ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಈ ಮಾಹಿತಿ ನೀಡಿದರು. ಖುಜಾ-ರಹೋ, ತಂಜಾವೂರು, ಬೃಹದೇಶ್ವರ, ಕೋನಾರ್ಕದ ಸೂರ್ಯದೇವಾಲಯ ಉಚಿತ ವೈಫೈ ಸೇವೆಯ ವ್ಯಾಪ್ತಿಗೆ ಒಳಪಡಲಿ ರುವ ಇತರೆ ಪ್ರಮುಖ ಐತಿಹಾಸಿಕ ಪ್ರವಾಸಿ ಕ್ಷೇತ್ರಗಳು.

ಯೋಜನೆಯಡಿ ಪ್ರತಿ ದಿನ ಆರಂಭದಲ್ಲಿ 30 ನಿಮಿಷ ಕಾಲ ಉಚಿತ ವೈಫೈಸೇವೆ ಕಲ್ಪಿಸಲಾಗುತ್ತದೆ. ಆ ಬಳಿಕದ ಪ್ರತಿ 30 ನಿಮಿಷಕ್ಕೆ ರು 20, 60 ನಿಮಿಷಕ್ಕೆ 30, 120 ನಿಮಿಷಕ್ಕೆ ರು 50 ಮತ್ತು ಇಡೀ ದಿನಕ್ಕೆ ರು 70 ಪಾವತಿಸಬೇಕಾಗುತ್ತದೆ.

ಮಂಡ್ಯದಲ್ಲೂ ಬ್ರಾಡ್‍ಬ್ಯಾಂಡ್
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಕರ್ನಾಟಕದ ಮಂಡ್ಯ ಜಿಲ್ಲೆಯ ಪ್ರತಿ ಜಿಲ್ಲೆಯ ಗ್ರಾ.ಪಂ.ಗಳಿಗೂ ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಲಭ್ಯವಾಗಲಿದೆ. ಈ ಮೂಲಕ ಇಂಥ ಸಾಧನೆ ಮಾಡಿದ ಕರ್ನಾಟಕದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದಿದ್ದಾರೆ ಜಿಪಂ ಸಿಇಒ ರೋಹಿಣಿ ಸಿಂಧೂರಿ. ಯೋಜನೆಗಾಗಿ ರು 12.70 ಕೋಟಿ ಖರ್ಚಾಗಲಿದೆ. ಅದರಲ್ಲಿ ಕೇಬಲ್ ಅಳವಡಿಕೆಗೆ ರು 9.30 ಕೋಟಿ, ಬ್ರಾಡ್‍ಬ್ಯಾಂಡ್ ಉಪಕರಣಗಳಿಗೆ ರು 3.40 ಕೋಟಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com