ಚೀನಾ ಹಿಂದಿಕ್ಕಲಿದೆ ಭಾರತದ ವೇಗ

ಜಿಡಿಪಿ
ಜಿಡಿಪಿ

ನವದೆಹಲಿ/ಮುಂಬೈ: `ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದ ಅರ್ಥ ವ್ಯವಸ್ಥೆ ಶರವೇಗದಲ್ಲಿ ಅಭಿವೃದ್ಧಿಯಾಗಲಿದೆ' ಎಂದಿದ್ದರು ಪ್ರಧಾನಿ ನರೇಂದ್ರ ಮೋದಿ.

ಅದಕ್ಕೆ ಪೂರಕವಾಗಿಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.4ರ ದರದಲ್ಲಿ ಬೆಳವಣಿಗೆ ಸಾಧಿಸಲಿದೆ. ಈ ಮೂಲಕ ಹಣಕಾಸು ವ್ಯವಸ್ಥೆ ಶೀಘ್ರವಾಗಿ ಅಭಿವೃದ್ಧಿಯಾಗುತ್ತಿದ್ದು, ಚೀನಾದ ಅರ್ಥ ವ್ಯವಸ್ಥೆಯ ವೇಗವನ್ನೂ ಹಿಂದಿಕ್ಕಲಿದೆ. ಇಂಥ ಸಾಧನೆ ಮಾಡುವ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರುವ ಹಣಕಾಸು ವ್ಯವಸ್ಥೆ ಎಂಬ ಅಗ್ಗಳಿಕೆಗೆ ದೇಶಕ್ಕೆ ಸಿಕ್ಕಿದೆ. ಹೀಗಾಗಿ, ಉತ್ತಮ ದಿನಗಳು ಬರಲಿವೆ ಎಂದು ನರೇಂದ್ರ ಮೋದಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದು ನಿಜವಾಗತೊಡಗಿದೆ.

ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರ ಕೆಲದಿನಗಳ ಹಿಂದಷ್ಟೇ ಒಟ್ಟು ತಲಾ ಆದಾಯ (ಜಿಡಿಪಿ) ಮೌಲ್ಯ ಮಾಪನದಲ್ಲಿ ಇತ್ತೀಚೆಗಷ್ಟೇ ಬದಲಾವಣೆ ತಂದಿತ್ತು. ಅದಕ್ಕೆ ಪೂರಕವಾಗಿ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7.5ರ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುವ ಸಾಧ್ಯತೆ ಇದೆ.

2013-14ನೇ ಹಣಕಾಸು ವರ್ಷದಲ್ಲಿ ಅದರ ಪ್ರಮಾಣ ಶೇ. 6.9ರಷ್ಟು ಇತ್ತು. ವಿಶ್ವದ ಮೂರನೇ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇಶದ ಹಣಕಾಸು ವ್ಯವಸ್ಥೆ 2010-11ನೇ ಸಾಲಿಗೆ ಹೋಲಿಸಿದಾಗ ಈ ಬಾರಿಯ ಪ್ರಗತಿ ಅದಕ್ಕಿಂತ ವೇಗ ಪಡೆದುಕೊಳ್ಳಲಿದೆ. ಆ ವರ್ಷದಲ್ಲಿ ಶೇ.8.7ರ ಬೆಳವಣಿಗೆಯನ್ನು ಸಾಧಿಸಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕೂಡ ಗಣನೀಯವಾಗಿ ಇಳಿದಿದೆ. ಹೀಗಾಗಿ, ದೇಶಿಯ ಮಾರುಕಟ್ಟೆಯಲ್ಲಿ ಕೂಡ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ (ಸಬ್ಸಿಡಿ ರಹಿತ) ಸಿಲಿಂಡರ್ ಬೆಲೆಯೂ ಗಣನೀಯವಾಗಿ ಇಳಿದಿತ್ತು. ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಇಳಿಕೆಯಾಗಿದೆ.

ಷೇರು ಕುಸಿತ: ದೆಹಲಿಯಲ್ಲಿ ಆಪ್ ನಿಚ್ಚಳ ಬಹುಮತದಿಂದ
ಅಧಿಕಾರಕ್ಕೆ ಬರಲಿದೆ ಎಂಬ ಸೂಚನೆ ಲಭಿಸಿರುವುದು ಬಾಂಬೆ ಷೇರು ಮಾರುಕಟ್ಟೆ ಮೇಲೆ ಸೋಮವಾರ ಪ್ರತಿಕೂಲ ಪರಿಣಾಮ ಬೀರಿದೆ. ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ 490 ಅಂಕ ಕುಸಿದು ದಿನ ಅಂತ್ಯಕ್ಕೆ 28, 227.39ರಲ್ಲಿ ಮುಕ್ತಾಯವಾಯಿತು. ನಿಫ್ಟಿ ಸೂಚ್ಯಂಕ ಕೂಡ 134.70 ಅಂಕಗಳಷ್ಟು ಪತನ ಕಂಡು, 8526ರಲ್ಲಿ ಕೊನೆಗೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com