ಭೂತ ಬಿಡಿಸ್ತೀನಂತಾ ಹೇಳಿ ಮಹಿಳೆ ಮೇಲೆ ರೇಪ್ ಮಾಡ್ದಾ ಪೂಜಾರಿ !

ಭೂತ ಬಿಡಿಸುವ ಹೆಸರಿನಲ್ಲಿ 34 ವರ್ಷದ ಮಹಿಳೆ ಮೇಲೆ ದೇವಸ್ಥಾನ ಪೂಜಾರಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್...
ಭೂತ ಬಿಡಿಸ್ತೀನಂತಾ ಹೇಳಿ ಮಹಿಳೆ ಮೇಲೆ ರೇಪ್ ಮಾಡ್ದಾ ಪೂಜಾರಿ !
Updated on

ಭೋಪಾಲ್: ಭೂತ ಬಿಡಿಸುವ ಹೆಸರಿನಲ್ಲಿ 34 ವರ್ಷದ ಮಹಿಳೆ ಮೇಲೆ ದೇವಸ್ಥಾನ ಪೂಜಾರಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಕಳೆದ ನಾಲ್ಕು ವರ್ಷಗಳಿಂದ ದೇವಾಲಯಕ್ಕೆ ಈ ಮಹಿಳೆ ಪ್ರತಿನಿತ್ಯಾ ಭೇಟಿ ನೀಡುತ್ತಿದ್ದಳು. ಒಂದು ತಿಂಗಳ ಹಿಂದೆ ಸಂತೋಷ್ ಕುಮಾರ್ ಕೌಶಿಕ್ ಎಂಬ ಪೂಜಾರಿ, ಮಹಿಳೆಯ ದೇಹವನ್ನು ದುಷ್ಟಶಕ್ತಿ ಪ್ರವೇಶಿಸಿದೆ ಎಂದು ಹೇಳಿ ಇದನ್ನು ಹೊಡೆದೋಡಿಸಲು ವಿಶೇಷ ಪೂಜೆ ಮಾಡಬೇಕೆಂದು ಹೇಳಿದ್ದಾನೆ.

ಪೂಜೆ ನೆಪದಲ್ಲಿ ಮಹಿಳೆ ಮನೆಗೆ ಹೋಗಿದ್ದಾನೆ. ಮನೆಯಲ್ಲಿದ್ದ ಗಂಡನನ್ನು ಹೊರಗೆ ಕಳುಹಿಸಿ, ಆಕೆಯ ಪ್ರಜ್ಞೆ ತಪ್ಪಿಸಿ, ಅತ್ಯಾಚಾರವೆಸಗಿದ್ದಾನೆ. ಪ್ರಜ್ಞೆ ಬಂದಾಗ ಆಕೆಯ ಕುತ್ತಿಗೆ ಸೇರಿದಂತೆ ದೇಹದ ಇತರೆ ಭಾಗದಲ್ಲಿ ಗಾಯಗಳು ಪತ್ತೆಯಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ.

ಮಹಿಳೆಯು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು, ಈ ವಿಷಯವನ್ನು ಯಾರಿಗೂ ಹೇಳದಂತೆ ಪೂಜಾರಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಆರೋಪಿ ಪೂಜಾರಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com