ಎಲೆಕ್ಟ್ರಿಕ್ ಕಾರಿಗಾಗಿ ರಹಸ್ಯ ಯೋಜನೆ ರೂಪಿಸುತ್ತಿರುವ ಆ್ಯಪಲ್

ವಾಚ್, ಐ ಫೋನ್, ಲ್ಯಾಪ್ ಟಾಪ್, ಐ ಪಾಡ್ ಆಯ್ತು ಇದೀಗ ಆ್ಯಪಲ್ ಕಂಪನಿ ಎಲೆಕ್ಟ್ರಿಕ್ ಕಾರೊಂದನ್ನು...
ಎಲೆಕ್ಟ್ರಿಕ್ ಕಾರಿಗಾಗಿ ರಹಸ್ಯ ಯೋಜನೆ ರೂಪಿಸುತ್ತಿರುವ ಆ್ಯಪಲ್

ವಾಷಿಂಗ್ಟನ್: ವಾಚ್, ಐ ಫೋನ್, ಲ್ಯಾಪ್ ಟಾಪ್, ಐ ಪಾಡ್ ಆಯ್ತು ಇದೀಗ ಆ್ಯಪಲ್ ಕಂಪನಿ ಎಲೆಕ್ಟ್ರಿಕ್ ಕಾರೊಂದನ್ನು ಅಭಿವೃದ್ಧಿ ಪಡಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

ಆ್ಯಪಲ್ ಕಂಪನಿಯ ಈ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಮಿನಿವ್ಯಾನ್‌ನಂತಿರಲ್ಲಿದ್ದು, ಈ ಯೋಜನೆ ಸಂಪೂರ್ಣಗೊಳ್ಳಲು ಸುಮಾರು ಒಂದು ವರ್ಷದ ಅವಧಿ ಬೇಕಾಗಲಿದೆ ಎಂದು ಹೇಳಿದೆ.

ಇತ್ತೀಚೆಗೆ ಆ್ಯಪಲ್ ಕಂಪನಿ ಮೋಟಾರು ವಾಹನ ತಂತ್ರಜ್ಞಾನಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದು, ಈವರೆಗಿನ ಇತರೆ ಕಂಪನಿಗಳ ಕಾರಿನಲ್ಲಿರದಂತಹ ಸೌಲಭ್ಯಗಳನ್ನು ಒದಗಿಸಲು ಆ್ಯಪಲ್ ಸಂಸ್ಥೆ ಈ ಕಾರ್ಯವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಅತಿ ಹೆಚ್ಚು ವೇಗದ ಇಂಟರ್ ನೆಟ್, ಸಾಫ್ಟ್‌ವೇರ್‌ಗಳ ಸೇವೆ, ನಾವಿಗೇಷನ್ ಮತ್ತು ಕಮ್ಯುನಿಕೇಷನ್ ಇನ್ನಿತರೆ ತಂತ್ರಜ್ಞಾನಗಳ ಸೌಲಭ್ಯಗಳು ಕಾರಿನಲ್ಲಿ ಒದಗಿಸಲು ಆ್ಯಪಲ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com