ಡಬಲ್ ಮೀನಿಂಗ್ ಪದಗಳು, ರಕ್ತಪಾತದ ಸೀನ್‍ಗಳಿಗೆ ಸೆನ್ಸಾರ್
ನವದೆಹಲಿ: ಇನ್ನು ಮುಂದೆ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಪದಗಳು, ಮಹಿಳೆಯರ ಮೇಲೆ ದೌರ್ಜನ್ಯ, ರಕ್ತಪಾತದ ವೈಭವೀಕರಣ ಮಾಡುವಂತಿಲ್ಲ.
ಇದು ಚಿತ್ರ ನಿರ್ಮಾಪಕರಿಗೆ ಸೆನ್ಸಾರ್ ಮಂಡಳಿ ನೀಡಿರುವ ಕಠಿಣ ಮಾರ್ಗಸೂಚಿ. ಶುಕ್ರವಾರ ಕೇಂದ್ರೀಯ ಸೆನ್ಸಾರ್ ಮಂಡಳಿ ಮುಖ್ಯಸ್ಥ ಪಹಲಾಜ್ ನಿಹಲಾನಿ ಅವರು ತಮ್ಮ ಪ್ರಾದೇಶಿಕ ಅಧಿಕಾರಿಗಳಿಗೆ ಈ ಬಗ್ಗೆ ಆದೇಶ ಹೊರಡಿಸಿದ್ದು, ಮಂಡಳಿಯ ಮಾರ್ಗಸೂಚಿಯನ್ನು ಪಾಲಿಸದ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡದಂತೆ ಸೂಚಿಸಿದ್ದಾರೆ.
ಮಾರ್ಗಸೂಚಿಯಲ್ಲಿ ಏನಿದೆ?
ಸೆನ್ಸಾರ್ ಮಂಡಳಿಯು ಕೆಲವೊಂದು ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪದಗಳನ್ನು ಪಟ್ಟಿ ಮಾಡಿದ್ದು, ಅವುಗಳನ್ನು ಸಿನಿಮಾಗಳಲ್ಲಿ ಬಳಸುವುದಕ್ಕೆ ನಿಷೇಧ ಹೇರಿದೆ. ಅವೆಂದರೆ,
ಸಿನಿಮಾಗಳಲ್ಲಿ ಬಾಂಬೆ ಪದ ಬಳಸುವಂತಿಲ್ಲ. ಅದರ ಬದಲಿಗೆ ಮುಂಬೈ ಎಂದೇ ಬಳಸಬೇಕು.
ಡಬಲ್ ಮೀನಿಂಗ್ ಪದಗಳ ಬಳಕೆಗೆ ನಿಷೇಧ.
ಮಹಿಳಾ ದೌರ್ಜನ್ಯ ಮತ್ತು ರಕ್ತಪಾತದ ವೈಭವೀಕರಣ ಸಲ್ಲ.
ಅಂತಿಮ ನಿರ್ಧಾರವಲ್ಲ
ಸೆನ್ಸಾರ್ ಮಂಡಳಿಯ ಮಾರ್ಗಸೂಚಿ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್, ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಮಂಡಳಿಯ ಮಾರ್ಗಸೂಚಿಯೇ ಅಂತಿಮವಲ್ಲ ಎಂದೂ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ