ರಿಲಯನ್ಸ್‌ಗೆ ಕೋಲ್ ಗಣಿ

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ನಡೆದ ಕಲ್ಲಿದ್ದಲು ಗಣಿಗಳ ಇ-ಹರಾಜಿನಲ್ಲಿ ಉದ್ಯಮಿ ಅನಿಲ್ ಅಂಬಾನಿ...
ಕಲ್ಲಿದ್ದಲು
ಕಲ್ಲಿದ್ದಲು

ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ನಡೆದ ಕಲ್ಲಿದ್ದಲು ಗಣಿಗಳ ಇ-ಹರಾಜಿನಲ್ಲಿ ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಸಿಮೆಂಟ್ ಮೊದಲ ಗಣಿ ಖರೀದಿಸಿದೆ. ಒಸಿಎಲ್ ಐರನ್ ಮತ್ತು ಸ್ಟೀಲ್ ಹಾಗೂ ಹಿಂದುಸ್ಥಾನ್ ಝಿಂಕ್ ಲಿ.ನ ಸ್ಫರ್ಧೆಯನ್ನು ಹಿಂದಿಕ್ಕಿ ಮಧ್ಯಪ್ರದೇಶದ ಸಿಯಾಲ್ ಘೋಗ್ರಿಯ ಗಣಿಯನ್ನು ರಿಲಯನ್ಸ್ ಖರೀದಿ ಮಾಡಿದೆ.

ರು.798 ಕೋಟಿಗೆ ಈ ಖರೀದಿ ಪ್ರಕ್ರಿಯೆ ನಡೆದಿದೆ.  ಈ ಗಣಿ ಒಟ್ಟು 29.38 ದಶಲಕ್ಷ ಟನ್ ಕಲ್ಲಿದ್ದಲು ನಿಕ್ಷೇಪ ಹೊಂದಿದೆ. ಇದರಲ್ಲಿ 5.69 ದಶಲಕ್ಷ ಟನ್ ಕಲ್ಲಿದ್ದನ್ನಷ್ಟೇ ಹೊರತೆಗೆಯಬಹುದು. ಕಂಪನಿಯು ಪ್ರತಿ ಕಲ್ಲಿದ್ದಲಿಗಾಗಿ ರು.1,402 ಟನ್ ಪಾವತಿ ಮಾಡಲು ಒಪ್ಪಿದೆ. ಘೋಗ್ರಿಯಾ ಗಣಿಯನ್ನು ಮೊದಲು ಪ್ರಿಸಂ ಸಿಮೆಂಟ್‌ಗೆ ನೀಡಲಾಗಿತ್ತು. ವಿದ್ಯುತ್ತೇತ್ತರ ಉದ್ದೇಶಕ್ಕಾಗಿ ಈ ಗಣಿಯನ್ನು ಮೀಸಲಿಡಲಾಗಿತ್ತು.

ಈ ಮಧ್ಯೆ, ಒಡಿಶಾದ ತಲಬಿರಾ-1ಕಲ್ಲಿದ್ದಲು ಬ್ಲಾಕ್‌ನ ಹರಾಜು ಪ್ರಕ್ರಿಯೆ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com