ಹಂದಿಜ್ವರ: ಪ್ರವಾಸೋದ್ಯಮಕ್ಕೆ 5,500 ಕೋಟಿ ನಷ್ಟ

ದೇಶದಾದ್ಯಂತ ಕಾಡುತ್ತಿರುವ ಹೆಚ್1ಎನ್1 ಮಾಹಾಮಾರಿ ಪರಿಣಾಮದಿಂದಾ ರಾಜಸ್ತಾನದ ಪ್ರವಾಸೋದ್ಯಮ...
ಹಂದಿಜ್ವರ: ಪ್ರವಾಸೋದ್ಯಮಕ್ಕೆ 5,500 ಕೋಟಿ ನಷ್ಟ

ಮುಂಬೈ: ದೇಶದಾದ್ಯಂತ ಕಾಡುತ್ತಿರುವ ಹೆಚ್1ಎನ್1 ಮಾಹಾಮಾರಿ ಪರಿಣಾಮದಿಂದಾ ರಾಜಸ್ತಾನದ ಪ್ರವಾಸೋದ್ಯಮ ಇಲಾಖೆಗೆ ಸುಮಾರು 5,500 ಕೋಟಿ ನಷ್ಟವನ್ನು ಉಂಟು ಮಾಡಿದೆ.

ರಾಜಸ್ತಾನ ಮತ್ತು ಮಹಾರಾಷ್ಟ್ರದಾದ್ಯಂತ ಎಚ್1ಎನ್ ಪರಿಣಾಮ ವ್ಯಾಪಕವಾಗಿದ್ದು, ದೇಶದಲ್ಲಿಯೇ ಅತಿಹೆಚ್ಚು ಹೆಚ್1ಎನ್1 ಪೀಡಿತ ರಾಜ್ಯಗಳಾಗಿವೆ. ಹೀಗಾಗಿ ಮಹಾಮಾರಿ ರೋಗಕ್ಕೆ ಹೆದರುತ್ತಿರುವ ವಿದೇಶೀಯ ಹಾಗೂ ದೇಶೀಯ ಜನರು ಪ್ರವಾಸಿ ತಾಣಗಳಿಗೆ ಹೋಗಲು ಭಯ ಭೀತರಾಗುತ್ತಿದ್ದಾರೆ. ಇದರಿಂದಾಗಿ ರಾಜಸ್ತಾನ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಗೆ ಬರೋಬ್ಬರಿ 5,500ಕೋಟಿ ರು.ಗಳಷ್ಟು ಭಾರಿ ನಷ್ಟ ಉಂಟಾಗಿದೆ.

ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ದೆಹಲಿ, ಆಗ್ರಾ, ಜೈಪುರ ಮತ್ತು ರಾಜಸ್ತಾನದ ಇತರೆ ನಗರಗಳಿಗೆ ವಿದೇಶೀಯರು ಅತೀ ಹೆಚ್ಚು ಭೇಟಿ ನೀಡುತ್ತಿದ್ದರು. ಆದರೆ ಎಚ್1ಎನ್1 ರೋಗದ ಪರಿಣಾಮದಿಂದಾಗಿ ಹೋಟೆಲ್, ಏರ್‌ಲೈನ್ಸ್, ಟ್ಯಾಕ್ಸಿ, ರೆಸ್ಟೋರೆಂಟ್ ಖಾಲಿ ಹೊಡೆಯುವಂತಾಗಿದ್ದು, ಹಂದಿಜ್ವರ ರೋಗದ ಪರಿಣಾಮದಿಂದಾಗಿ ಪ್ರವಾಸೋದ್ಯಮ ಇಲಾಖೆ ನಷ್ಟದಲ್ಲಿ ಸಿಲುಕುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com