ಶಿವರಾತ್ರಿ ಆಚರಣೆಗೆ ಪಾಕ್‍ಗೆ ಹೋದ ಹಿಂದೂಗಳು

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಐತಿಹಾಸಿಕ ಕತಾಸ್ ರಾಜ್ ದೇಗುಲದಲ್ಲಿ ಶಿವರಾತ್ರಿ ಆಚರಣೆಗಾಗಿ ಭಾರತದಿಂದ 21 ಮಂದಿ ಹಿಂದೂಗಳು ತೆರಳಿದ್ದಾರೆ.

ವಾಘಾ ಗಡಿ ಮೂಲಕ ತೆರಳಿದ ಅವರನ್ನು ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಉಸ್ತುವಾರಿ ವಹಿಸಿರುವ ಸಂಸ್ಥೆಯ ಅಧಿಕಾರಿಗಳು ಬರಮಾಡಿಕೊಂಡರು. ಲಾಹೋರ್‍ನಿಂದ 271 ಕಿಮೀ ದೂರದ ಚಕ್ವಾಲ್ ಜಿಲ್ಲೆಯಲ್ಲಿ ಐತಿಹಾಸಿಕ ಕತಾಸ್ ದೇಗುಲ ಇದೆ. ಅದಕ್ಕೆ ಸುಮಾರು 900 ವರ್ಷಗಳ ಇತಿಹಾಸ ಇದೆ.

ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಉಸ್ತುವಾರಿ ಹೊತ್ತಿರುವ ಸಂಸ್ಥೆಯ ಅಧಿಕಾರಿಗಳು ಮಾತನಾಡಿ, ಭಾರತದಿಂದ ಕನಿಷ್ಠ 100 ಮಂದಿ ಹಿಂದೂಗಳು ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಕೇವಲ 21 ಮಂದಿ ಆಗಮಿಸಿದ್ದಾರೆ ಎಂದಿದ್ದಾರೆ. ಅವರು ಫೆ.21ರಂದು ಭಾರತಕ್ಕೆ ವಾಪಸಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com