ಕರಾಚಿಯಲ್ಲೇ ಅವಿತಿದ್ದಾನೆ ದಾವೂದ್

ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ
Updated on

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿರುವುದು ಮತ್ತೆ ಸಾಬೀತಾಗಿದೆ. ಜತೆಗೆ ಪಾಕಿಸ್ತಾನದ ಸುಳ್ಳಿನ ಕಂತೆಗೂ ಇಂಬು ಸಿಕ್ಕಿದೆ.

ದಾವೂದ್ ಮತ್ತು ಸಹಚರನ ನಡುವೆ ನಡೆದ ಫೋನ್ ಸಂಭಾಷಣೆಯಲ್ಲಿ ಭಾರತದ ಭದ್ರತಾ ಸಂಸ್ಥೆಯೊಂದು ಆಲಿಸಿದ್ದು, 2 ನಿಮಿಷಗಳ ಸಂಭಾಷಣೆಯಲ್ಲಿ ದಾವೂದ್ ನ ಮಾತಿನಿಂದಲೇ ಆತ ಕರಾಚಿಯಲ್ಲಿರುವುದು ತಿಳಿದುಬಂದಿದೆ.
 
ಸಂಭಾಷಣೆಯಲ್ಲಿ ಅನೇಕ ರಹಸ್ಯ ಪದಗಳೂ (ಕೋಡ್ ವರ್ಡ್) ಇದ್ದು, ದಾವೂದ್ ತನ್ನ ಸಹಚರನೊಂದಿಗೆ ಯಾವುದೋ ಒಂದು ಕಟ್ಟಡ ಕಾಮಗಾರಿ ಬಗ್ಗೆ ಮಾತುಕತೆ ನಡೆಸುತ್ತಿರುವುದು ಬಯಲಾಗಿದೆ. ಇದೇ ವೇಳೆ ಅವರು ಹಣಕಾಸಿನ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಸಹಚರನು, ನಾನು ಯಾಸೀರ್ ಮೂಲಕ ದುಬೈಗೆ ಹಣ ಕಳುಹಿಸುತ್ತೇನೆ' ಎಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ದಾವೂದ್, ಅರೆ, ಯಾಸೀರ್ ಇಲ್ಲೇ ಕರಾಚಿಯಲ್ಲಿ ಇದ್ದಾನೆ' ಎಂದಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com