ಭಾರತದಲ್ಲಿ ಎಲ್ಲಾ ಧರ್ಮವನ್ನು ಸ್ವಾಗತಿಸುವ ಸಂಪ್ರದಾಯವಿದೆ: ಮೋದಿ

ಧಾರ್ಮಿಕ ಸ್ವಾತಂತ್ರ್ಯ ಎನ್ನುವುದು ಸಾರ್ವತ್ರಿಕ ಮಾನವ ಹಕ್ಕಾಗಿದ್ದು, ಭಾರತದಲ್ಲಿ ಎಲ್ಲಾ ಧರ್ಮಗಳನ್ನು ಸ್ವಾಗತಿಸುವ ಸಂಪ್ರದಾಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯ ಎನ್ನುವುದು ಸಾರ್ವತ್ರಿಕ ಮಾನವ ಹಕ್ಕಾಗಿದ್ದು, ಭಾರತದಲ್ಲಿ ಎಲ್ಲಾ ಧರ್ಮಗಳನ್ನು ಸ್ವಾಗತಿಸುವ ಸಂಪ್ರದಾಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಸೈಂಟ್‌ವುಡ್ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ ಅವರು, ರಾಷ್ಟ್ರಕ್ಕೆ ಕೌಂಟಿ ಸೇಂಟ್ ಕುರಿಯಾಕೋಸ್ ಎಲಿಯಾಸ್ ಚವರ ಮತ್ತು ಸೇಂಟ್ ಯುಪ್ರಸ್ಯಾ ಸಮುದಾಯಗಳ ಕುರಿತು ಹೆಮ್ಮೆಯಿದೆ. ಭಾರತದಲ್ಲಿ ಆಧ್ಯಾತ್ಮಕತೆ ಪರಂಪರೆ ಬಲವಾಗಿ ಬೇರೂರಿದೆ. ಎಲ್ಲಾ ಧರ್ಮಗಳ ಕುರಿತು ಸಮಾನ ಗೌರವ ನೀಡುವ ಸಂಪ್ರದಾಯ ಭಾರತದಲ್ಲಿ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಸ್ವೀಕರಿಸುವ ಹಕ್ಕು ಇದ್ದು, ಧರ್ಮಗಳ ವಿರುದ್ಧ ಹಾಗೂ ಧಾರ್ಮಿಕ ಸಂಪ್ರದಾಯಗಳ ವಿರುದ್ಧ ದೌರ್ಜನ್ಯವೆಸಗುವವರ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಬರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com