ಕಿರಣ್‍ಬೇಡಿ
ಕಿರಣ್‍ಬೇಡಿ

ದೆಹಲಿ ಹೀನಾಯ ಸೋಲು; ಬಿಜೆಪಿಗೆ ಆರೆಸ್ಸೆಸ್ ಚಾಟಿ

ದೆಹಲಿ ವಿಧಾನಸಭೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ತರಾಟೆಗೆ...

ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ತರಾಟೆಗೆ ತೆಗೆದುಕೊಂಡಿದೆ. ಕೊನೆಯ ಕ್ಷಣದಲ್ಲಿ ಕಿರಣ್‍ಬೇಡಿ ಅವರನ್ನು `ಪ್ಯಾರಾಚೂಟ್ ಸಿಎಂ' ಅಭ್ಯರ್ಥಿ ಎಂದು ಘೋಷಿಸಿದ ಬಿಜೆಪಿಯ ನಿರ್ಧಾರವು ಜನರಿಗೆ ತಪ್ಪು ಸಂದೇಶ ರವಾನಿಸಿತು ಎಂದು ಆರೆಸ್ಸೆಸ್ ತನ್ನ ಮುಖವಾಣಿ `ಆರ್ಗನೈಸರ್'ನಲ್ಲಿ ಅಭಿಪ್ರಾಯಪಟ್ಟಿದೆ. ಈ ಮೂಲಕ ಆರೆಸ್ಸೆಸ್ ದೆಹಲಿ
ಚುನಾವಣೆಗೆ ಸಂಬಂಧಿಸಿ ಬಿಜೆಪಿ ಕಾರ್ಯತಂತ್ರದ ಬಗ್ಗೆ ತನಗಿದ್ದ ಅಸಮಾಧಾನವನ್ನು ಈಗ ಹೊರಹಾಕಿದೆ. ಮೊದಲೇ ಸೋಲೊಪ್ಪಿಕೊಂಡಂತೆ ಆಯ್ತು; ಆಪ್ ನಾಯಕ ಅರವಿಂದ ಕೇಜ್ರಿವಾಲ್ ವಿರುದ್ಧ ಕಿರಣ್ ಬೇಡಿ ಅವರನ್ನು ಸಿಎಂ ಅಭ್ಯರ್ಥಿ ಯನ್ನಾಗಿ ತಡವಾಗಿ ಘೋಷಿಸುವ ಮೂಲಕ ಬಿಜೆಪಿ ಎಡವಿತು. ಜತೆಗೆ, ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ  ಹಿರಿಯ ನಾಯಕರಿದ್ದರೂ ಬೇಡಿ  ಹೆಸರನ್ನು ಘೋಷಿಸಿದ ಬಿಜೆಪಿ ತನ್ನ ಸೋಲನ್ನು ಚುನಾವಣೆಗೆ ಮೊದಲೇ ಒಪ್ಪಿಕೊಂಡಂತಾಯಿತು ಎಂದು ಆರ್ಗನೈಸರ್‍ನಲ್ಲಿ ತಿಳಿಸಲಾಗಿದೆ. ಬಿಜೆಪಿಗೆ ತಕ್ಕ ಪಾಠ: ಲೋಕಸಭೆ ಚುನಾವಣೆ ವೇಳೆ ಮೋದಿ ಅವರು, ದೆಹಲಿಯಲ್ಲಿ ನನಗೆ ವಿಜಯ್ ಗೋಯಲ್, ವಿಜೇಂದ್ರ ಗುಪ್ತಾ ಮತ್ತು ಯ್ ಕುಮಾರ್  ಮಲ್ಹೋತ್ರಾಎಂಬ ಮೂರು `ವಿಜಯ'ಗಳಿವೆ ಎಂದಿದ್ದರು. ಆದರೆ ಇವರೆಲ್ಲರನ್ನೂ ಈ ಬಾರಿ ಕಡೆಗಣಿಸ ಲಾಯಿತು. ಬಿಜೆಪಿಯ ದರ್ಜೆ ಮತ್ತು ದಾಖಲೆಗಳಿಗೆ ದೆಹಲಿ ಚುನಾವಣೆಯನ್ನು ಗೆಲ್ಲಲಾಗಲಿಲ್ಲ. ಒಟ್ಟಾರೆ ಬಿಜೆಪಿ ತಕ್ಕ ಪಾಠ ಕಲಿಯಿತು ಎಂದೂ ಪತ್ರಿಕೆಯ ವರದಿ ಹೇಳಿದೆ. ಇದೇ ವೇಳೆ, ಇತರೆ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸದ್ಯದಲ್ಲೇ ಬಿಜೆಪಿ ಮತ್ತು ಆರೆಸ್ಸೆಸ್ ಸಭೆ ನಡೆಯುವ ಸಾಧ್ಯತೆಯಿದೆ.


ಜೀವನಪೂರ್ತಿ ಉಚಿತ ಊಟ ಸಿಗದು: ಬೇಡಿ
`ಜನರು ಸೇವೆಯನ್ನು ಬಯಸುತ್ತಾರೆ. ಜತೆಗೆ ಉಚಿತ ಕೊಡುಗೆ ಗಳೂ ಬೇಕೆನ್ನುತ್ತಾರೆ. ನೀವು ಹೆಚ್ಚು ಕೊಟ್ಟರೆ, ನಿಮಗೂ ಹೆಚ್ಚು ಬರುತ್ತದೆ. ಆದರೂ ಜನರಿಗೆ ಇನ್ನೂ ಈ ಸೌಲಭ್ಯ ಸಿಕ್ಕಿಲ್ಲ. ಏಕೆಂದರೆ ಬದುಕು ಪೂರ್ತಿಯಾರಿಗೂ ಉಚಿತ ಊಟ ಸಿಗುವುದಿಲ್ಲ.' ಹೀಗೆಂದು ಹೇಳಿದ್ದು ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕಿರಣ್ ಬೇಡಿ. ಸೋಲಿನ ಬಳಿಕ ಮೊದಲ ಬಾರಿಗೆ ಕಿರಣ್ ಅವರು ವಿಸ್ತ್ರತವಾದ ಪ್ರತಿಕ್ರಿಯೆ  ನೀಡಿದ್ದಾರೆ. ತಮ್ಮ ಬ್ಲಾಗ್ ನಲ್ಲಿ `ಭಾರತೀಯರಿಗೆ ನನ್ನ ಮುಕ್ತ ಪತ್ರ' ಎಂಬ ಶೀರ್ಷಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಬೇಡಿ,`ಪೌಲ್‍ಗೆ ನೀಡಬೇಕೆಂದು ನೀವು ಪೀಟರ್‍ನನ್ನು ದರೋಡೆ ಮಾಡಿದರೆ, ಕೊನೆಗೆ ಎಲ್ಲರೂ ದರೋಡೆಗೆ ಒಳಗಾಗಬೇಕಾಗುತ್ತದೆ' ಎನ್ನುವ ಮೂಲಕ ಆಪ್‍ನ `ಉಚಿತ' ಕೊಡುಗೆಗಳನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಜತೆಗೆ, ನಾನು ನನ್ನ ಎಲ್ಲ ಶಕ್ತಿ, ಅನುಭವವನ್ನು ಬಳಸಿಕೊಂಡರೂ ರಾಜಕೀಯವೆಂಬ ಪರೀಕ್ಷೆಯಲ್ಲಿ ಸೋತಿದ್ದೇನೆ. ಆದರೆ, ನನ್ನೊಳಗೆ ನಾನು ಸೋತಿಲ್ಲ ಎಂದೂ ಬೇಡಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com