ಮಂಗಳದಲ್ಲಿ ಮೋಡ ಕವಿದ ವಾತಾವರಣ!

ಮಂಗಳದಲ್ಲಿ ಮೋಡದ ಮಾದರಿಯ ಆಕೃತಿಯೊಂದು ಪತ್ತೆಯಾಗಿದ್ದು, ವಿಜ್ಞಾನಿಗಳು ಈಗ ಅದರ ಬಗ್ಗೆ ಚಿಂತನೆ ನಡೆಸಲಾರಂಭಿಸಿದ್ದಾರೆ...
ಮಂಗಳದಲ್ಲಿ ಮೋಡದ ಮಾದರಿಯಲ್ಲಿ ಪತ್ತೆಯಾದ ಆಕೃತಿಯಾ ಚಿತ್ರ
ಮಂಗಳದಲ್ಲಿ ಮೋಡದ ಮಾದರಿಯಲ್ಲಿ ಪತ್ತೆಯಾದ ಆಕೃತಿಯಾ ಚಿತ್ರ

ಲಂಡನ್: ಮಂಗಳದಲ್ಲಿ ಮೋಡದ ಮಾದರಿಯ ಆಕೃತಿಯೊಂದು ಪತ್ತೆಯಾಗಿದ್ದು, ವಿಜ್ಞಾನಿಗಳು ಈಗ ಅದರ ಬಗ್ಗೆ ಚಿಂತನೆ ನಡೆಸಲಾರಂಭಿಸಿದ್ದಾರೆ.

ಕಳೆದ ವರ್ಷದ ಮಾರ್ಚ್ ಏಪ್ರಿಲ್ ನಲ್ಲಿ ಇಂಥದ್ದೊಂದು ಆಕೃತಿ ಪತ್ತೆಯಾಗಿದೆಯೆಂದು ಕೆಲ ಹವ್ಯಾಸಿ ಖಗೋಳಶಾಸ್ತ್ರಜ್ಞರು ಹೇಳಿದ್ದರು. ಮಂಗಳನ ನೆಲದಿಂದ ಸುಮಾರು 250 ಕಿಮೀ ಎತ್ತರದಲ್ಲಿ ಇಂಥದ್ದೊಂದು ಆಕೃತಿ ಪತ್ತೆಯಾಗಿದೆ. ಈ ಹಿಂದೆಯೂ ಸಹ ಮೋಡದ ಮಾದರಿಯ ಆಕೃತಿ ನೆಲದಿಂದ 100ಕಿಮೀ ಎತ್ತರದಲ್ಲಿ ಮೂಡಿತ್ತು. ಆದರೆ ಈಗ ಮೂಡಿರುವ ಆಕೃತಿ ಅಲ್ಪಾವಧಿಯಲ್ಲಿ ಆಗಸದಲ್ಲೇ 5ಲಕ್ಷ ಕಿಮೀನಷ್ಟು ಬೃಹದಾಕಾರವಾಗಿ ಬೆಳೆದಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಿಚಿತ್ರವೆಂಬತೆ ಮಂಗಳನ ಸುತ್ತ ಸುತ್ತುತ್ತಿರುವ ಯಾವ ಪ್ರಮುಖ ಬಾಹ್ಯಾಕಾಶ ನೌಕೆಯೂ ಸಹ ಇಂಥದ್ದೊಂದು ಆಕೃತಿಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿಲ್ಲ. ಆದರೆ ಹಬಲ್ ಬಾಹ್ಯಾಕಾಶ ದೂರದರ್ಶಕವು 1995 1999 ಇಸವಿಯಲ್ಲಿ ಸೆರೆಹಿಡಿದಿದ್ದ ಚಿತ್ರಗಳಲ್ಲಿ ಮತ್ತು ಕೆಲ ಹವ್ಯಾಸಿ ಖಗೋಳ ಶಾಸ್ತ್ರಜ್ಞರು 2011 2014 ರವರೆಗೆ ಸೆರೆಹಿಡಿದ ಚಿತ್ರಗಳಲ್ಲಿ ಮಾತ್ರ ಮೋಡದ ಮಾದರಿಯ ಆಕೃತಿ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com