ತಾಯಿ ಮಕ್ಕಳನ್ನು ಹೆರುವ ಕಾರ್ಖಾನೆಯಲ್ಲ: ಮೋಹನ್ ಭಾಗವತ್

ನಮ್ಮ ತಾಯಿಯಂದಿರು ಮಕ್ಕಳನ್ನು ಹೆರುವ ಕಾರ್ಖಾನೆಯಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ...
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ನವೆದೆಹಲಿ: ನಮ್ಮ ತಾಯಿಯಂದಿರು ಮಕ್ಕಳನ್ನು ಹೆರುವ ಕಾರ್ಖಾನೆಯಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಕಾನ್ಪುರದಲ್ಲಿ ಸಂಘಪರಿವಾರ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೋಹನ್ ಭಾಗವತ್ ಅವರು, ಹಿಂದೂ ಮಹಿಳೆಯರು ಕನಿಷ್ಟ 4 ಮಕ್ಕಳಿಗೆ ಜನ್ಮ ನೀಡಬೇಕು ಎಂಬ ಸಾಕ್ಷಿ ಮಹಾರಾಜ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು ನಮ್ಮ ತಾಯಿಯಂದಿರು ಮಕ್ಕಳನ್ನು ಹೆರುವ ಕಾರ್ಖಾನೆಯಲ್ಲ. ಮಕ್ಕಳನ್ನು ಹೆರುವ ನಿರ್ಧಾರ ಪೋಷಕರ ವೈಯಕ್ತಿಕ ವಿಷಯ. ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಸಚಿವರು ಯೋಚನೆ ಮಾಡಿ  ಮಾತನಾಡಬೇಕು ಎಂದು ಹೇಳಿದ್ದಾರೆ.

ಈ ಹಿಂದೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹಿಂದೂ ಮಹಿಳೆಯರು ಕನಿಷ್ಟ ಪಕ್ಷ ನಾಲ್ಕು ಮಕ್ಕಳನ್ನಾದರೂ ಹೆರಬೇಕು. 1 ಮಗುವನ್ನು ಗಡಿ ಕಾಯಲು, 1 ಮಗುವನ್ನು ಸಂತನಾಗಲು ಹಾಗೂ ಮತ್ತೆರಡು ಮಗುವನ್ನು ಕುಟುಂಬವನ್ನು ನೋಡಿಕೊಳ್ಳಲು ಬಿಡಬೇಕು ಎಂಬ ಹೇಳಿಕೆ ನೀಡುವ ಮೂಲಕ ವಿವಾದವೊಂದನ್ನು ಸೃಷ್ಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com