ಮೈತ್ರಿ ಮಾತುಕತೆ :ಆರೆಸ್ಸೆಸ್ ಅಪಸ್ವರ

ಒಂದೆಡೆ ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಪಿಡಿಪಿ ಜತೆ ಮಾತುಕತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಈ ನಡೆಗೆ ಆರೆಸ್ಸೆಸ್‍ನಿಂದ ಅಪಸ್ವರ ಕೇಳಿಬಂದಿದೆ...
ಮೋಹನ್ ಭಾಗವತ್
ಮೋಹನ್ ಭಾಗವತ್

ಜಮ್ಮು: ಒಂದೆಡೆ ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಪಿಡಿಪಿ ಜತೆ ಮಾತುಕತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಈ ನಡೆಗೆ ಆರೆಸ್ಸೆಸ್‍ನಿಂದ ಅಪಸ್ವರ ಕೇಳಿಬಂದಿದೆ.

ಸಂವಿಧಾನದ 370ನೇ ವಿಧಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರಿ ಕಾಯ್ದೆ ಸೇರಿದಂತೆ ಕೆಲವು ಪ್ರಮುಖ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ತನ್ನ ನಿಲುವು ಬದಲಿಸಬಾರದು ಎನ್ನುವುದು ಆರೆಸ್ಸೆಸ್‍ನ ಸೂಚನೆ. ಈ ಬಗ್ಗೆ ಮಾತನಾಡಿರುವ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್, ಅಂಧಾಭಿಮಾನ ಮತ್ತು ಪ್ರತ್ಯೇಕತಾವಾದ ದೇಶದ ಆರೋಗ್ಯಕ್ಕೆ ಒಳ್ಳೆಯದಲ್ಲ. ಜಮ್ಮು ಮತ್ತು ಕಾಶ್ಮೀರದ ಜನತೆ ದೆಹಲಿಯನ್ನು ನೋಡಬೇಕೇ ಹೊರತು ಇಸ್ಲಾಮಾಬಾದನ್ನಲ್ಲ ಎಂದಿದ್ದಾರೆ.

ಇದಾದ ಸ್ವಲ್ಪ ಹೊತ್ತಲ್ಲೇ ಆರೆಸ್ಸೆಸ್ ಮಾಜಿ ನಾಯಕ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾತನಾಡಿ, ಪಿಡಿಪಿ ಜತೆ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗನೆ ಸಿಹಿ ಸುದ್ದಿ ನೀಡಲಿದ್ದೇವೆ. ಆರೆಸ್ಸೆಸ್‍ನಲ್ಲಿರುವ `ಜವಾಬ್ದಾರಿಯುತ ಜನ' ವಿಚಾರದ ಬಗ್ಗೆ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com