ಪ್ರಧಾನಿ ಸೂಟ್‍ಗೆ ಬಿಡ್ ಮೊತ್ತ ಹೆಚ್ಚಳ

ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್‍ನ ಮೌಲ್ಯ ಹೆಚ್ಚುತ್ತಾ ಹೋಗ್ತಿದೆ. ಬುಧವಾರ ರು. 1.21 ಕೋಟಿ ಮೊತ್ತಕ್ಕೆ ನಿಂತಿದ್ದ ಬಿಡ್, ಗುರುವಾರಕ್ಕೆ ರು.1.41 ಕೋಟಿಗೆ ಬಂದು ನಿಂತಿದೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್‍ನ ಮೌಲ್ಯ ಹೆಚ್ಚುತ್ತಾ ಹೋಗ್ತಿದೆ. ಬುಧವಾರ ರು. 1.21 ಕೋಟಿ ಮೊತ್ತಕ್ಕೆ ನಿಂತಿದ್ದ ಬಿಡ್, ಗುರುವಾರಕ್ಕೆ ರು.1.41 ಕೋಟಿಗೆ ಬಂದು ನಿಂತಿದೆ.

ಬುಧವಾರ ಜವಳಿ ಉದ್ಯಮಿ ರಾಜೇಶ್ ಜುನೇಜಾ ರು. 1.21 ಕೋಟಿ ಮೊತ್ತಕ್ಕೆ ಬಿಡ್ ಕೂಗಿದ್ದರು. ಗ್ಲೋಬಲ್ ಮೋದಿ ಫ್ಯಾನ್ ಕ್ಲಬ್ ನ ಸಂಸ್ಥಾಪಕ ರಾಜೇಶ್ ಮಹೇಶ್ವರಿ ಈ ಮೊತ್ತವನ್ನೂ ಮೀರಿ ರು. 1.26 ಕೋಟಿ ಮೊತ್ತಕ್ಕೆ ಗುರುವಾರ ಬೆಳಗ್ಗೆ ಬಿಡ್ ಮಾಡಿದರು.

ಹರಾಜು ಪೈಪೋಟಿ: ಗುರುವಾರ ಮಧ್ಯಾಹ್ನದ ವೇಳೆಗೆ ಸೂರತ್ ಮೂಲದ ವಜ್ರ ವ್ಯಾಪಾರಿ ಮುಖೇಶ್ ಪಟೇಲ್ ರು.1.39 ಕೋಟಿಗೆ ಬಿಡ್ ಕೂಗಿದರು. ಆ ನಂತರ ಸ್ವಲ್ಪ ಹೊತ್ತಿನಲ್ಲಿಯೇ ಭಾವ್‍ನಗರದ ವಜ್ರ ವ್ಯಾಪಾರಿ, ಹಡಗು ಒಡೆಯುವ ಉದ್ಯಮಿ, ಲೀಲಾ ಸಮೂಹದ ಕಂಪನಿಗಳ ಮುಖ್ಯಸ್ಥ ಕೋಮಲ್‍ಕಾಂತ್ ಶರ್ಮ ರು.1.41 ಕೋಟಿಗೆ ಬಿಡ್ ಕೂಗಿದರು. ಉತ್ತಮ ಉದ್ದೇಶ: ರು 1.41 ಕೋಟಿಗೆ ಬಿಡ್ ಕೂಗಿದ ಕೋಮಲ್‍ಕಾಂತ್ ಶರ್ಮಾ ಪ್ರತಿನಿಧಿ ಚಿರಾಗ್ ಮೆಹ್ತಾ ಪ್ರತಿಕ್ರಿಯಿಸಿ, ಮೋದಿ ಅವರ ಗಂಗಾ ಶುದ್ಧೀಕರಣದ ಉತ್ತಮ ಉದ್ದೇಶಕ್ಕಾಗಿ ಈ ಮೊತ್ತದ ಬಿಡ್ ಕೂಗಲಾಗಿದೆ. ಶುಕ್ರವಾರ ಶರ್ಮಾ ತಮ್ಮ ಬಿಡ್ ಮೊತ್ತವನ್ನು ಹೆಚ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com