
ನವದೆಹಲಿ: ನೋಟು ಮುದ್ರಣದ ವಿಚಾರಕ್ಕೆ ಸಂಬಂಧಿಸಿ ಹಿಂದಿನ ಯುಪಿಎ ಸರ್ಕಾರ ರಾಷ್ಟ್ರೀಯ ಭದ್ರತೆಯನ್ನು ನಿರ್ಲಕ್ಷ್ಯ ಮಾಡಿದ್ದ ವಿಚಾರ ಇದೀಗ ಬಹಿರಂಗವಾಗಿದೆ.
ಆಂತರಿಕ ವಿಚಾರಣಾ ಸಮಿತಿ ಸಲ್ಲಿಸಿದ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಭಾರತೀಯ ನೋಟುಗಳನ್ನು ಮುದ್ರಣ ಮಾಡುವಾಗ ಅವುಗಳಲ್ಲಿ ಅಳವಡಿಸಬೇಕಾಗಿದ್ದ ಕೆಲವು ಭದ್ರತಾ ಸೌಲಭ್ಯಗಳಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ಹಣಕಾಸು ಸಚಿವಾಲಯದಡಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು ಈ ಸತ್ಯ ಗೊತ್ತಿದ್ದರೂ ಮುಚ್ಚಿಟ್ಟಿದ್ದರು.
ಇದೆಲ್ಲ ನಡೆದದ್ದು 2012ರಲ್ಲಿ. ಹೋಷಂಗಾಬಾದ್ ಕಾರ್ಖಾನೆಯ ನೋಟಿನ ಕಾಗದಕ್ಕೆ ಅಳವಡಿಸಲಾಗಿದ್ದ ಭದ್ರತಾ ಸೌಲಭ್ಯದಲ್ಲಿ ದೋಷವಿತ್ತು. ಆತಂಕದ ವಿಚಾರವೆಂದರೆ `ಇಸ್ಲಾಮಿಕ್ ರಾಷ್ಟ್ರ' ವೊಂದರಿಂದ ತರಿಸಿಕೊಳ್ಳಲಾಗಿತ್ತು. ರು.10 ನೋಟನ್ನು ಪರಿಶೀಲಿಸಿದಾಗ ಅದರ ಭದ್ರತಾ ಪಟ್ಟಿ ( ನೋಟಿನಲ್ಲಿರುವ ಬೆಳ್ಳಿ ಬಣ್ಣದ ಪಟ್ಟಿ)ಯಲ್ಲಿದ್ದ ಅಕ್ಷರಗಳು ಅರೇಬಿಕ್ ರೀತಿ ಕಾಣುತ್ತಿದ್ದವು. ಕೆಲವಕ್ಕೆ ಭದ್ರತಾ ಪಟ್ಟಿಯೇ ಅಳವಡಿಸಲಾಗಿರಲಿಲ್ಲ. ಗುಣ ಮಟ್ಟ ನಿಯಂತ್ರಣ ಸಾಧನದಿಂದ ಪರಿಶೀಲಿಸಿದಾಗ ಭದ್ರತಾ ಪಟ್ಟಿ ಆಯಸ್ಕಾಂತೀಯ ಗುಣ ಹೊಂದಿರದಿದ್ದುದು ಬೆಳಕಿಗೆ ಬಂದಿತ್ತು.ಇಂತಹ 10 ಲಕ್ಷ ನೋಟು ಮುದ್ರಿಸಲಾಗಿತ್ತು.
Advertisement