
ಸೂರತ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ 'ಸೂಟ್' ಅನ್ನು ಹರಾಜಿನ ಕಡೆಯ ದಿನವಾದ ಶುಕ್ರವಾರ ಬರೋಬ್ಬರಿ 4.31 ಕೋಟಿ ರುಪಾಯಿಗೆ ಖರೀದಿಸಲಾಗಿದೆ.
ನರೇಂದ್ರ ದಾಮೋದರ ಮೋದಿ ಎಂದು ಚಿನ್ನದ ದಾರದಲ್ಲಿ ಬರೆದಿರುವುದೇ ಅದರ ವಿಶೇಷತೆಯಾಗಿದ್ದು, ಒಬಾಮ ಭೇಟಿ ವೇಳೆ ಈ ಸೂಟ್ ಪ್ರಮುಖ ಆಕರ್ಷಣೆಯಾಗಿತ್ತು.
ಸೂರತ್‌ನಲ್ಲಿ ಮೋದಿ ಸೂಟ್ ಸೇರಿದಂತೆ ಪ್ರಧಾನಿ ವಿದೇಶ ಪ್ರವಾಸ ಕೈಗೊಂಡಿದ್ದಾಗ ಮತ್ತು ವಿದೇಶಿ ಅತಿಥಿಗಳು ದೆಹಲಿಗೆ ಭೇಟಿ ನೀಡಿದ್ದ ವೇಳೆ ನೀಡಿದ ಉಡುಗೊರೆಗಳನ್ನು ಹರಾಜಿಗೆ ಹಾಕಲಾಗಿತ್ತು. ಹರಾಜಿನಲ್ಲಿ ಗುಜರಾತ್‌ನ ಧರ್ಮಾನಂದನ್ ಗ್ರೂಪ್ ಅಧ್ಯಕ್ಷ ಹಾಗೂ ವಜ್ರದ ವ್ಯಾಪಾರಿ ಲಾಲ್‌ಜಿ ಭಾಯಿ ಪಟೇಲ್ ಅವರು ಮೋದಿ ಸೂಟ್ ಅನ್ನು 4.31 ಕೋಟಿ ರುಪಾಯಿಗೆ ಖರೀದಿಸಿದ್ದಾರೆ.
ಈ ಮುಂಚೆ ಉದ್ಯಮಿ ಹಿತೇಶ್ ಪಟೇಲ್ 2.85 ಕೋಟಿ ರುಪಾಯಿಗೆ ಬಿಡ್ ಮಾಡಿದ್ದರು. ಬಿಜೆಪಿ ನಾಯಕ ರಾಜುಭಾಯಿ ಅಗರವಾಲ್ ಅವರು 51 ಲಕ್ಷ ಕೂಗಿದ್ದರು. ಮೋದಿ ಸೂಟ್‌ಗೆ 11 ಲಕ್ಷದಿಂದ ಬಿಡ್ ಆರಂಭವಾಗಿದ್ದು, ಈಗ 4.17 ಕೋಟಿಗೆ ಬಂದು ನಿಂತಿದೆ. ಕೇಂದ್ರ ಸರ್ಕಾರ ಮೂರು ದಿನಗಳ ಈ ಹರಾಜು ಮೇಳ ಆಯೋಜಿಸಿತ್ತು.
ಈ ಹರಾಜಿನಿಂದ ಬಂದ ಹಣವು ನಮಾಮಿ ಗಂಗೆ ಟ್ರಸ್ಟ್‍ಗೆ ದೇಣಿಗೆ ರೂಪದಲ್ಲಿ ನೀಡಲಾಗುವುದು ಎಂದೂ ಕೇಂದ್ರ ತಿಳಿಸಿದೆ.
Advertisement