ಸಮಾನ ವೇತನ, ಸಮಾನ ಹುದ್ದೆಗೆ ಸುಪ್ರೀಂ ತಾಕೀತು

ಸೇನೆಯ ನಿವೃತ್ತ ಸಿಬ್ಬಂದಿಗೆ ಸಮಾನ ಹುದ್ದೆ, ಸಮಾನ ಪಿಂಚಣಿ (ಒಆರ್‍ಪಿಒ) ನೀತಿಯನ್ನು ಶೀಘ್ರ ಜಾರಿಗೊಳಿಸಿ. ಇದರ ಅನುಷ್ಠಾನ ಮಾಡುವಂತೆ ತೀರ್ಪು ನೀಡಿ 6 ವರ್ಷ ಗತಿಸಿದರೂ ಪ್ರಗತಿ ಕಾಣಲಿಲ್ಲ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಸೇನೆಯ ನಿವೃತ್ತ ಸಿಬ್ಬಂದಿಗೆ ಸಮಾನ ಹುದ್ದೆ, ಸಮಾನ ಪಿಂಚಣಿ (ಒಆರ್‍ಪಿಒ) ನೀತಿಯನ್ನು ಶೀಘ್ರ ಜಾರಿಗೊಳಿಸಿ. ಇದರ ಅನುಷ್ಠಾನ ಮಾಡುವಂತೆ ತೀರ್ಪು ನೀಡಿ 6 ವರ್ಷ ಗತಿಸಿದರೂ ಪ್ರಗತಿ ಕಾಣಲಿಲ್ಲ.

ಲೋಕಸಭೆ ಚುನಾವಣೆಯ ನಿಮ್ಮ ಪ್ರಣಾಳಿಕೆಯಲ್ಲೂ ಇದೇ ಭರವಸೆ ಇತ್ತು ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಆದೇಶ ಪಾಲಿಸದಿರುವುದು ನ್ಯಾಯಾಂಗ ನಿಂದನೆಯಾಗಿದೆ. ಇನ್ನಷ್ಟು ಸಮಯಾವಕಾಶ ನೀಡಲು ಆಗಲ್ಲ. ಇನ್ನು ಕೇವಲ 3 ತಿಂಗಳು ಮಾತ್ರ ಅವಕಾಶ ನೀಡುತ್ತೇವೆ. ಅಷ್ಟೊರಳಗೆ ನೀತಿಯನ್ನು ಜಾರಿಗೊಳಿಸಬೇಕು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.

ಲೋಕಸಭೆ ಚುನಾವಣೆ ವೇಳೆ ನಿಮ್ಮ ಪ್ರಣಾಳಿಕೆಯಲ್ಲಿ ಈ ನೀತಿ ಜಾರಿ ಭರವಸೆ ನೀಡಿದ್ದೀರಿ. ಮಾತನ್ನು ಉಳಿಸಿಕೊಳ್ಳುವುದು ಕರ್ತವ್ಯ ಕೂಡ. ಸೇನಾ ಸಿಬ್ಬಂದ್ಧಿ ಹಿಂದಿನ ವೇತನ, ಅನುಭವಗಳು ನಗಣ್ಯವಾಗಿದ್ದು, ಅವರ ಇರುವ ಹುದ್ದೆ ಮೇಲೆ ಸಮಾನವಾದ ಪಿಂಚಣಿ ನೀಡಬೇಕು ಎಂದು ಸಾಲಿಸಿಟರ್ ಜನರಲ್ ಪಿಂಕಿ ಆನಂದ್‍ಗೆ ಪೀಠ ಸೂಚಿಸಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಿಂಕಿ ಆನಂದ್ ಸುಪ್ರೀಂಗೆ ತಿಳಿಸಿದ್ದಾರೆ. ಒಆರ್‍ಪಿಒ ನೀತಿ ಜಾರಿ ಬಗ್ಗೆ ಸುಪ್ರೀಂನಿಂದ ತೀರ್ಪು ಪ್ರಕಟವಾಗಿ 6 ವರ್ಷ ಗತಿಸಿದರೂ ಅನುಷ್ಠಾನವಾಗದ ಬಗ್ಗೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ನಿವೃತ್ತ ಮೇಜರ್ ಜ. ಎಸ್‍ಪಿಎಸ್ ವೈನ್ಸ್ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com