ಏರೋ ಇಂಡಿಯಾದಲ್ಲಿ ಸ್ವಚ್ಛ ಭಾರತ

ಬೆಂಗಳೂರಿನಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಏರೋ ಇಂಡಿಯಾದಲ್ಲಿ `ಸ್ವಚ್ಛ ಭಾರತ' ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ...
ಏರೋ ಇಂಡಿಯಾದಲ್ಲಿ `ಸ್ವಚ್ಛ ಭಾರತ' ಅಭಿಯಾನ
ಏರೋ ಇಂಡಿಯಾದಲ್ಲಿ `ಸ್ವಚ್ಛ ಭಾರತ' ಅಭಿಯಾನ
Updated on

ಯಲಹಂಕ ವಾಯುನೆಲೆ: ಬೆಂಗಳೂರಿನಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಏರೋ ಇಂಡಿಯಾದಲ್ಲಿ `ಸ್ವಚ್ಛ ಭಾರತ' ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಒಣ ಕಸ ಬಿದ್ದಿರದಂತೆ ಎಚ್ಚರ ವಹಿಸಲಾಗುತ್ತಿದ್ದು, ಹಸಿ ತ್ಯಾಜ್ಯಗಳ ನಿರ್ವಹಣೆಯನ್ನೂ ಸ್ಥಳದಲ್ಲಿಯೇ ಮಾಡಲಾಗುತ್ತಿದೆ. ಖಾಸಗಿ ಕಂಪನಿಯೊಂದರ ನೆರವಿನಿಂದ ಏರೋ ಇಂಡಿಯಾದಲ್ಲಿ ಈ ಬಾರಿ ಹಸಿ ತ್ಯಾಜ್ಯ ನಿರ್ವಹಣೆಗಾಗಿ ಹೊಸ ಪ್ರಯೋಗ ಮಾಡಲಾಗಿದೆ.

ರೆಡ್ಡೊನೆಚುರಾ ಎಂಬ ಕಂಪನಿಯು ಹಸಿ ತ್ಯಾಜ್ಯಗಳ ನಿರ್ವಹಣೆಗೆ ಮೂರು ಘಟಕಗಳನ್ನು ಯಲಹಂಕ ವಾಯುನೆಲೆ ಯಲ್ಲಿ ಆರಂಭಿಸಿದೆ. ವಿಶೇಷವಾಗಿ ಫುಡ್ ಕೋರ್ಟ್ ಹಾಗೂ ಆಹಾರ ಮಳಿಗೆಗಳಿರುವ ಜಾಗದಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗಿದೆ. ಸುಮಾರು 28 ಚದರ ಅಡಿಯಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು, 250 ಕೆಜಿ ಸಾಮರ್ಥ್ಯವನ್ನು ಹೊಂದಿದೆ.

ಕೇವಲ 48 ಗಂಟೆಗಳಲ್ಲಿ ಇದು ಗೊಬ್ಬರವಾಗಿ ಪರಿ ವರ್ತನೆಯಾಗುವುದರಿಂದ ಕಸ ಸಂಸ್ಕರಣೆಗೆ ವಾರಗಟ್ಟಲೆ ಕಾಯಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿರುವ ಕಾರಣದಿಂದ ಕಸ ಸಂಸ್ಕರಣೆಗೆ ಏರೋ ಇಂಡಿಯಾ ಆಯೋಜಕರು ಹೆಚ್ಚಿನ ಆಸಕ್ತಿ ತೋರಿದ್ದರು. ಈ ಹಿನ್ನೆಲೆಯಲ್ಲಿ ರೆಡ್ಡೊನೆ ಚುರಾ ಕಂಪನಿಯ ಸಹಯೋಗದಿಂದ ಈ ಘಟಕ ತೆರೆಯಲಾಗಿದೆ. ಹಸಿ ತ್ಯಾಜ್ಯವನ್ನು ಈ ಘಟಕದೊಳಗೆ ಹಾಕಿದಾಗ ಶೇ.80ರಷ್ಟು ಕಸವು ಸಂಸ್ಕರಣೆಯಾಗಿ ಶೇ.20ರ ಪ್ರಮಾಣ ದಲ್ಲಿ ಗೊಬ್ಬರ ಉತ್ಪಾದನೆಯಾಗುತ್ತದೆ. ಬೆಂಗಳೂರು ಮೂಲದ ಕಂಪನಿಯಾಗಿರುವ ರೆಡ್ಡೊನೆಚುರಾ ಈಗಾಗಲೇ ಕೆಲ ಖಾಸಗಿ ಹೋಟೆಲ್‍ಗಳಲ್ಲಿ ಘಟಕ ಹೊಂದಿದೆ.

ಆಹಾರ ಪದಾರ್ಥಗಳನ್ನು ನೇರವಾಗಿ ಅಲ್ಲಿಗೆ ಹಾಕಿ ಯಾವುದೇ ದುರ್ವಾಸನೆಯಿ ಲ್ಲದಂತೆ ಸಂಸ್ಕರಿಸಬಹುದಾಗಿದೆ. ಅದರ ಪಕ್ಕದಲ್ಲೇ ನಿಂತುಕೊಂಡರೂ ವಾಸನೆ ಬರುವುದಿಲ್ಲ. 250 ಕೆಜಿ ಸಾಮಥ್ರ್ಯದ ಘಟಕದಿಂದ 600 ಮನೆಗಳ ಹಸಿ ತ್ಯಾಜ್ಯ ನಿರ್ವಹಣೆ ಮಾಡಬಹುದಾಗಿದೆ ಎಂದು ಕಂಪನಿಯ ನಿರ್ದೇಶಕ ಅಭಿಶೇಕ್ ಗುಪ್ತಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com