
ಲಖನೌ/ಸೈಫಾಯ್: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಮೊಮ್ಮಗ, ಹಾಲಿ ಸಂಸದ ತೇಜ್ ಪ್ರತಾಪ್ ಯಾದವ್ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕೊನೆಯ ಪುತ್ರಿ ರಾಜಲಕ್ಷ್ಮೀಯ ವಿವಾಹ ಪ್ರಯುಕ್ತ ಶನಿವಾರ ಉತ್ತರ ಪ್ರದೇಶದ ಸೈಫಾಯ್‌ಯಲ್ಲಿ ನಡೆದ ಮಹಾ ತಿಲಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.
ಇಂದು ಬೆಳಗ್ಗೆ ಸೈಫಾಯ್ ಗ್ರಾಮಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲು ಪ್ರಸಾದ್ ಯಾದವ್ ಅವರು ಸ್ವಾಗತಿಸಿದರು. ಯಾದವ್ ಕುಟುಂಬದೊಂದಿಗೆ ಸುಮಾರು 20 ನಿಮಿಷ ಕಳೆದ ಪ್ರಧಾನಿ, ಬಳಿಕ ದೆಹಲಿಗೆ ತೆರಳಿದರು.
ಮೈನ್‌ಪುರಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜ್ ಪ್ರತಾಪ್ ಯಾದವ್ ಅವರ 'ಮಹಾ ತಿಲಕ'ಕ್ಕೆ ಸೈಫಾಯ್ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಸಮಾರಂಭಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸೇರಿದಂತೆ ಸುಮಾರು 1 ಲಕ್ಷ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
Advertisement