
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೂಟ್ ಹರಾಜು ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಶಿವಸೇನೆ ಹರಾಜುಗೊಂಡಿರುವುದು ಎರಡು ತುಂಡು ಬಟ್ಟೆಯಾದರೂ, ಅದನ್ನು ಧರಿಸಿರುವ ವ್ಯಕ್ತಿಯಿಂದ ಆ ಬಟ್ಟೆ ಮೌಲ್ಯ ನಿರ್ಧಾರವಾಗುತ್ತದೆ ಎಂದು ಹೇಳಿದೆ.
ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, 2 ಪೀಸ್ ಬಟ್ಟೆಯಾಗಿರಬಹುದು, ಆದರೆ ಆ ಬಟ್ಟೆಯನ್ನು ತೊಟ್ಟ ವ್ಯಕ್ತಿಯಿಂದ ಅದರ ಮೌಲ್ಯ ಹೆಚ್ಚುತ್ತದೆ. ಹಾಗಾಗಿ ಮೋದಿ ಅವರ ಬಂದ್‌ಗಲಾ ಸೂಟ್ 4.31ಕೋಟಿ ರುಪಾಯಿಗಳಿಗೆ ಖರೀದಿಯಾಗಿರುವುದು ಎಂದು ಹೇಳಿದೆ.
ಮೋದಿಯವರ ಹರಾಜು ಕ್ರಮವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷ, ರಾಹುಲ್‌ಗಾಂಧಿ ಅವರ ಚಪ್ಪಲಿ, ಶೂ ಹಾಗೂ ಇನ್ನಿತರೆ ವಸ್ತುಗಳನ್ನು ಹರಾಜಿಗಿಟ್ಟು, ಆ ಹರಾಜಿನಲ್ಲಿ ಎಷ್ಟು ಹಣ ಬರುತ್ತದೆ ಎಂದು ನೋಡೋಣ, ಅದೇ ರೀತಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮಪ್ಲರ್ ಹರಾಜಿಗಿಡಲಿ, ಲಾಲೂ ಪ್ರಸಾದ್, ಮುಲಾಯಂ ಸಿಂಗ್ ಯಾದವ್ ಅವರೂ ಸಹ ತಮ್ಮ ವಸ್ತುಗಳನ್ನು ಹರಾಜಿಗಿಡಲಿ ಎಷ್ಟು ಮೊತ್ತಕ್ಕೆ ಹರಾಜು ಕೂಗುತ್ತಾರೆ, ಅದರಿಂದ ಎಷ್ಟು ಮೊತ್ತ ಬರುತ್ತದೆ ಎಂದು ನೋಡೋಣ ಎಂದು ಶಿವಸೇನೆ ಮುಖವಾಣಿಯಲ್ಲಿ ಹೇಳಿಕೊಂಡಿದೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಸೂಟ್‌ನ ಹರಾಜಿನ ಕಡೆಯ ದಿನವಾಗಿದ್ದ ನಿನ್ನೆ ದಾಖಲೆ ಮೊತ್ತವಾದ ಬರೋಬ್ಬರಿ 4.31 ಕೋಟಿಗೆ ಗುಜರಾತ್‌ನ ಧರ್ಮಾನಂದನ್ ಗ್ರೂಪ್ ಅಧ್ಯಕ್ಷ ಹಾಗೂ ವಜ್ರದ ವ್ಯಾಪಾರಿ ಲಾಲ್‌ಜಿ ಬಾಯಿ ಪಟೇಲ್ ಅವರು ಖರೀದಿಸಿದ್ದರು.
Advertisement