ಕಾಂಗ್ರೆಸ್
ಕಾಂಗ್ರೆಸ್

ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಸದಸ್ಯರ ಜೇಬಿಗೆ `ಕೈ' ಹಾಕಿದರು!

ನವದೆಹಲಿ: ಲೋಕಸಭಾ ಚುನಾವಣೆ ಹೀನಾಯ ಸೋಲು ಒಂದು ಕಾಲದ ಶ್ರೀಮಂತ ಪಕ್ಷ ಕಾಂಗ್ರೆಸ್ ಅನ್ನು ಆರ್ಥಿಕವಾಗಿ ಕಂಗೆಡಿಸಿದೆ.

ಚುನಾವಣಾ ಪ್ರಚಾರ ವೇಳೆ ಮಾಡಲಾಗುವ ಸಣ್ಣಪುಟ್ಟ ಖರ್ಚಿಗೂ ಈ ಪಕ್ಷ ಈಗ ಹಿಂದೆ ಮುಂದೆ  ಮುಂದೆ ನೋಡುವ ಸ್ಥಿತಿಯಲ್ಲಿದೆ. ಹಾಗಾಗಿ ಪಕ್ಷದ ದೇಣಿಗೆಗಾಗಿ ತನ್ನ ಮೂರು ಕೋಟಿ ಸದಸ್ಯರ ಪಡೆಯನ್ನೇ `ಬಂಡವಾಳ' ಮಾಡಿಕೊಳ್ಳಲು ಹೊರಟಿದೆ. ಪಕ್ಷದ ದಿನ ನಿತ್ಯದ ಖರ್ಚು, ಚುನಾವಣಾ ವೆಚ್ಚಗಳಿಗಾಗಿ ಸದಸ್ಯರ ಜೇಬಿಗೆ ಕೈ ಹಾಕಲು  ನಿರ್ಧರಿಸಿದೆ.

ಪಕ್ಷದ ಪ್ರತಿಸದಸ್ಯ ಇನ್ನು ಮುಂದೆ ವರ್ಷಕ್ಕೆ ರು. 250 ಅನ್ನು ಸದಸ್ಯತ್ವ ಶುಲ್ಕವಾಗಿ ಪಾವತಿಸುವುದು ಕಡ್ಡಯ ಮಾಡಿ ಸುತ್ತೋಲೆ ಹೊರಡಿಸಿದೆ. ಈವರೆಗೆ ಪ್ರತಿ ಸದಸ್ಯರಿಂದ 5 ರುಪಾಯಿ ಸಂಗ್ರಹಿಸಲಾಗುತ್ತಿತ್ತು. ಆದರೆ ಪಕ್ಷಕ್ಕೆ ಇದೀಗ ಬೇರೆ ಮೂಲಗಳಿಂದ ಹಣ ಹರಿದುಬಾರದೇ ಇರುವುದರಿಂದ ಈ ಮಾರ್ಗ ಅನಿ
ವಾರ್ಯ ಎನ್ನುವಂತಾಗಿದೆ. ಹೇಗೂ ಪಕ್ಷದಲ್ಲಿ 3 ಕೋಟಿ ಸದಸ್ಯರಿದ್ದಾರೆ. ವರ್ಷಕ್ಕೆ ಸರಾಸರಿ ರು. 750 ಕೋಟಿ ಬೇಕಾಗುತ್ತದೆ. ಹೀಗಾಗಿ ಒಬ್ಬೊಬ್ಬರಿಂದ ರು. 250 ಅನ್ನು ಸಂಗ್ರಹಿಸಿದರೆ, ಈ ಗುರಿ ಮುಟ್ಟಬಹುದು ಎಂಬ ಲೆಕ್ಕಾಚಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ರಾಜ್ಯಕ್ಕೂ ಪಾಲು: ಹೀಗೆ ಸಂಗ್ರಹವಾಗುವ ಎಲ್ಲಾ  ಹಣವೂ ಹೈಕಮಾಂಡ್‍ಗೆ ಸೇರುವುದಿಲ್ಲ. ಇಲ್ಲಿ ಆಯಾ ರಾಜ್ಯಗಳಿಗೂ ಪಾಲಿದೆ. ಆದರೆ, ಈ ಹಣದಲ್ಲಿ ಹೈಕಮಾಂಡ್‍ಗೆ ಮಹತ್ವದ ಪಾಲು ಲಭಿಸಲಿದೆ. ಅಂದರೆ 75:25 ಮಾದರಿಯಲ್ಲಿ ಈ ಹಣ ಹಂಚಿಕೊಳ್ಳಲಾಗುತ್ತದೆ. ಇದರಿಂದ ಶೇ. 75ರಷ್ಟು ಹಣ ದೆಹಲಿ ಸೇರದರೆ, ಶೇ. 25ರಷ್ಟು ಹಣ ಆಯಾ ರಾಜ್ಯಗಳ ಪಕ್ಷದ ಕಾರ್ಯಗಳಿಗೆ ಬಳಸಿಕೊಳ್ಳಬಹುದು.

Related Stories

No stories found.

Advertisement

X
Kannada Prabha
www.kannadaprabha.com