ಲೈಂಗಿಕ ಕಿರುಕುಳ ಆರೋಪ: ವಿಜ್ಞಾನಿ ಆರ್.ಕೆ ಪಚೋರಿ ರಾಜಿನಾಮೆ

ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದ ವಿಜ್ಞಾನಿ ಆರ್.ಕೆ ಪಚೋರಿ...
ಆರ್‌ ಕೆ ಪಚೌರಿ
ಆರ್‌ ಕೆ ಪಚೌರಿ

ನವದೆಹಲಿ: ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದ ವಿಜ್ಞಾನಿ ಆರ್.ಕೆ ಪಚೋರಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಆರ್.ಕೆ ಪಚೋರಿ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ತಜ್ಞರ ಸಮಿತಿಗೆ ರಾಜಿನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ತೈಲ ಮತ್ತು ಸಂಪನ್ಮೂಲ ಸಂಸ್ಥೆಯ(ಟೆರಿ) ಪ್ರಧಾನ ನಿರ್ದೇಶಕ ರಾಜೇಂದ್ರ ಕೆ.ಪಚೌರಿ ಅವರು ಬಂಧನಕ್ಕೆ ದೆಹಲಿ ಕೋರ್ಟ್ ಫೆ.26ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಸೆಕ್ಷನ್ 354ಎ ಮತ್ತು 354 ಡಿ ಅಡಿಯಲ್ಲಿ ಲೈಂಗಿಕ ಕಿರುಕುಳ ಆರೋಪ ಹಾಗೂ ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಬೆದರಿಕೆ ಅಪರಾಧದ ಆರೋಪಗಳಲ್ಲಿ ಫೆ.13ರಂದು ಪಚೌರಿ ಅವರು ವಿರುದ್ಧ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ತನ್ನ ಮೇಲಿನ ಆರೋಪಗಳ ತನಿಖೆಯಲ್ಲಿ ತಾನು ಪ್ರಭಾವ ಬೀರಿಯೇನು ಎಂಬ ಬಗ್ಗೆ ಕೆಲವರಲ್ಲಿ ಇರುವ ಭಯವನ್ನು ನಿವಾರಿಸುವ ಸಲುವಾಗಿ ತಾನು ರಜೆಯ ಮೇಲೆ ಹೋಗಲು ನಿರ್ಧರಿಸಿದ್ದೇನೆ ಎಂದು ಪಚೌರಿ ಅವರು ಈ ಮೊದಲು ಪತ್ರ ಬರೆದಿದ್ದರು. ಇದರ ಬೆನ್ನಲ್ಲೆ ಇಂದು ವಿಶ್ವ ಸಂಸ್ಥೆಯ ಹವಾಮಾನ ವೈಪರೀತ್ಯ ತಜ್ಞರ ಸಮಿತಿಯಿಂದ ಹೊರ ನಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com