
ನವದೆಹಲಿ: ಆರಂಭದ ದಿನವೇ `ಭೂ'ಕಂಪ! ಸಂಸತ್‍ನಲ್ಲಿ ಸೋಮವಾರ ಬಜೆಟ್ ಅಧಿವೇಶನ ಆರಂಭವಾಗಿದ್ದು, ಈ ಬಾರಿ `ಭೂಸ್ವಾಧೀನ ಕಾಯ್ದೆ ತಿದ್ದುಪಡಿ' ದೊಡ್ಡ ಗದ್ದಲ ಸೃಷ್ಟಿಸುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ಏತನ್ಮಧ್ಯೆ, ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾಡಿದ ಭಾಷಣದಲ್ಲಿ, `ಭೂಸ್ವಾಧೀನ ಕಾಯ್ದೆ ಗೆ ತಿದ್ದುಪಡಿ ಅನಿವಾರ್ಯ. ಭೂಮಿ ಕಳೆದುಕೊಳ್ಳುವ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದಟಛಿ' ಎಂದು ಸರಕಾರ ಹೇಳಿಸಿದ್ದರೂ, ಪ್ರತಿಪಕ್ಷಗಳು ಮಾತ್ರ `ಭೂ' ಅಸ್ತ್ರ ವನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳುವ ಪ್ರಕ್ರಿಯೆ ಶುರುವಿಟ್ಟುಕೊಂಡಿವೆ.ಭೂಸ್ವಾಧೀನಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಒಂದೆಡೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದರೆ, ಮತ್ತೊಂದೆಡೆ ಗಾಂಧಿವಾದಿ ಅಣ್ಣಾ ಹಜಾರೆ ಅವರೂ ಇದರ ವಿರುದ್ಧ ಧ್ವನಿಯೆತ್ತಿ, ಮತ್ತೆ ಜಂತರ್ ಮಂತರ್‍ಗೆ ಧಾವಿಸಿದ್ದಾರೆ. ಇವೆಲ್ಲವೂ ಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತುರ್ತು ಸಂಸದೀಯ ಮಂಡಳಿ ಸಭೆ ನಡೆಸಿದೆ.
ಪ್ರತಿಪಕ್ಷಗಳ ವಾಗ್ದಾಳಿ
ರಾಷ್ಟ್ರಪತಿ ಭಾಷಣದ ಮೂಲಕ ಭೂಸ್ವಾಧೀನ ಕಾಯ್ದೆ ತಿದ್ದು ಪಡಿಯನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿ ಸಿದರೂ ಅದು ಪ್ರತಿಪಕ್ಷಗಳಿಗೆ ತಾಕುವಲ್ಲಿ ವಿಫ ಲವಾಗಿದೆ. ಭಾಷಣ ಮುಗಿದ ಬೆನ್ನಲ್ಲೇ ಸಚಿವ ರಾಜೀವ್ ಪ್ರತಾಪ್ ರೂಡಿ ಅವರು ಭೂಸ್ವಾಧೀ ನ ಸೇರಿದಂತೆ ಸರ್ಕಾರದ 6 ಸುಗ್ರೀವಾಜ್ಞೆ ಗಳ ಪ್ರತಿಯನ್ನು ಲೋಕಸಭೆಯ ಮುಂದಿಟ್ಟರು. ಅಷ್ಟರಲ್ಲೇ ಎದ್ದುನಿಂತ ತೃಣಮೂಲ ಕಾಂಗ್ರೆಸ್ ಸದಸ್ಯರು, `ಸುಗ್ರೀವಾಜ್ಞೆ ರಾಜ್ ಕೊನೆಗೊಳ್ಳಲಿ' ಎಂದು ಘೋಷಣೆ ಕೂಗಲಾರಂಬಿsಸಿದರು. ಪ್ರತಿಪಕ್ಷಗಳ ಗಲಾಟೆ ತೀವ್ರಗೊ ಳ್ಳುತ್ತಿದ್ದಂತೆಯೇ ಮಾತನಾಡಿದ ಸಂಸದೀಯ ವ್ಯವಹಾರಗಳಸಚಿವ ವೆಂಕಯ್ಯ ನಾಯ್ಡು, ಸುಗ್ರೀವಾಜ್ಞೆ ಗೆ ಸಂಬಂಧಿಸಿ ಯಾವುದೇ ಆಕ್ಷೇಪಗಳಿದ್ದರೂ ಅವುಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುತ್ತೇವೆ. ದಯವಿಟ್ಟು ಈ ವಿಚಾರಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಕೋರಿದರು.
ಹಿಂದಿನ ಕಾಯ್ದೆ ಯಿಂದ ಅರ್ಧಕ್ಕಿಂತ ಹೆಚ್ಚು ರೈತರಿಗೆ ಪರಿಹಾರ ಸಿಗುತ್ತಿರಲಿಲ್ಲ. ಭೂಸ್ವಾಧೀನ ಸುಗ್ರೀವಾಜ್ಞೆ ಮೂಲಕ ನಮ್ಮ ಸರ್ಕಾರ ಎಲ್ಲ ರೈತರಿಗೆ ನೆರವಾಗಿದೆ. ಅಣುಶಕ್ತಿ, ಪೆಟ್ರೋಲಿಯಂ ಮತ್ತು ಹೆದ್ದಾರಿ ಯೋ ಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೂ ಪರಿಹಾರ ಸಿಗುತ್ತದೆ. ರಾಷ್ಟ್ರಪತಿ ಭಾಷಣದಲ್ಲಿ ಹೊಸತೇನೂ ಇರಲಿಲ್ಲ. ಯುಪಿಎ ಸರ್ಕಾರದ ನೀತಿಗಳಿಗೆ ಪುನಃ ತೇಪೆ ಹಾಕಿ, ಅದನ್ನೇ ಭಾಷಣದಲ್ಲಿ ಹೇಳಲಾಗಿದೆ.
- ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ
ರೈತರ ಹಿತಕ್ಕೆ ಬದ್ಧ : ರಾಷ್ಟ್ರಪತಿ
ಸೋಮವಾರ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾ ಡಿದ ರಾಷ್ಟ್ರಪತಿ ಪ್ರಣಬ್, ಸರ್ಕಾರದ ಬಡವರ ಪರ, ಸುಧಾರಣಾ ಪರ ಕಾರ್ಯಕ್ರಮಗಳ ವಿವರವನ್ನು ಸಂಸದರ ಮುಂದಿಟ್ಟರು. ಈ ವೇಳೆ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯ ಎಂದ ಅವರು, ಭೂಮಿ ಕಳೆದುಕೊಳ್ಳುವ ರೈತರ ಹಿತವನ್ನೂ ಕಾಪಾಡಲಾಗುತ್ತದೆ ಎಂದು ಭರವಸೆ ನೀಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆ, ಶಾಲೆಗಳ ನಿರ್ಮಾಣ ಮತ್ತಿತರ ಸಾರ್ವಜನಿಕ ಅಗತ್ಯದ ಯೋಜನೆಗಳಿಗೆ ಭೂಸ್ವಾಧೀನ ಅನಿವಾರ್ಯ. ಆದರೂ ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ನ್ಯಾಯಯುತ ಪರಿಹಾರ, ಭೂಸ್ವಾಧೀ ನದಲ್ಲಿ ಪಾರದರ್ಶಕತೆ, ಪುನರ್ವಸತಿ ಮತ್ತು ಪುನಶ್ಚೇತನ ಹಕ್ಕು ಕಾಯ್ದೆಯನ್ನು ಸೂಕ್ತವಾಗಿ ಪರಿಷ್ಕರಿಸಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಾಗುವ ತೊಂದರೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ. ಇದು ಮೂಲಸೌಕರ್ಯ,ಗ್ರಾಮೀಣ ಗೃಹ ನಿರ್ಮಾಣ, ಶಾಲೆಗಳು, ಆಸ್ಪತ್ರೆಗಳು ಮತ್ತಿತರ ಸಾರ್ವಜನಿಕ ಯೋಜನೆಗಳನ್ನು ತ್ವರಿತಗತಿ ಪೂರ್ಣಗೊಳಿಸಲುನೆರವಾಗಲಿದೆ ಎಂದಿದ್ದಾರೆ.
- ಪ್ರಕಾಶ್ ಜಾವಡೇಕರ್, ಪರಿಸರ ಸಚಿವ
Advertisement