
ನವದೆಹಲಿ: ಕಾರ್ಪೊರೇಟ್ ಬೇಹುಗಾರಿಕೆ ಪ್ರಕರಣ ಸಂಸತ್‍ನಲ್ಲೂ ಪ್ರತಿಧ್ವನಿಸಿದೆ. ಪೆಟ್ರೋಲಿಯಂ, ವಿದ್ಯುತ್, ಕಲ್ಲಿದ್ದಲು ಮತ್ತು ರಕ್ಷಣಾ ಸಚಿವಾಲಯಗಳಲ್ಲಿ ನಡೆದಿದೆಯೆನ್ನಲಾದ ಬೇಹುಗಾರಿಕೆ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಸರ್ಕಾರವು ಬೇಹು ಪ್ರಕರಣಕ್ಕೆ ಸಂಬಂಧಿಸಿ ಮೌನವಹಿಸಿದೆ. ಸತ್ಯ ಹೊರ ಬರಬೇಕೆಂದರೆ ಜೆಪಿಸಿ ರಚಿಸಲೇಬೇಕು ಎಂದಿದ್ದಾರೆ. ಇದೇ ವೇಳೆ, ಬೇಹುಗಾರಿಕೆ ಆರೋಪಿಗಳಿಗೆ ನಕಲಿ ಗುರುತಿನ ಚೀಟಿ ಒದಗಿಸಿದ್ದ ಆರೋಪದಲ್ಲಿ ರಕ್ಷಣಾ ಸಚಿವಾಲಯದ ಸಿಬ್ಬಂದಿಯೊಬ್ಬನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಈತನನ್ನು ದೆಹಲಿ ನ್ಯಾಯಾಲಯ ದಿನದ ಮಟ್ಟಿಗೆ ಪೊಲೀಸ್ ವಶಕ್ಕೊಪ್ಪಿಸಿದೆ. ಇತರೆ 5 ಮಂದಿ ಕಾರ್ಪೊರೇಟ್ ಅಧಿಕಾರಿಗಳ ನ್ಯಾಯಾಂಗ ಬಂಧನವನ್ನು ಮಾ.5ರವರೆಗೆ ವಿಸ್ತರಿಸಿದೆ.
Advertisement